ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ
ಮಧುಗಿರಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪಟ್ಟಣದ ದಂಡಿ ಮಾರಮ್ಮ ದೇವಸ್ಥಾನದ ಹಿಂಭಾಗ ಕಸಬಾ ಹೋಬಳಿ ಬಸವನಹಳ್ಳಿ ನಿವಾಸಿ ಅಶ್ವಿನಿ ಬಿನ್ ಹನುಮಂತರಾಯಪ್ಪ (20 ವ) ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿಗ್ರಿ ಓದುತಿದ್ದ ಅಶ್ವಿನಿ ನಿನ್ನೆ ಕಾಲೇಜಿಗೆ ತೆರಳಿದ್ದು, ಸಂಜೆಯಾದರೂ ಹಿಂತಿರುಗಿ ಮನೆಗೆ ಬಂದಿಲ್ಲ. ಮನೆಯರು ರಾತ್ರಿ ವರೆಗೂ ಹುಡುಕಾಡಿ ಬೆಳಿಗ್ಗೆ ದೂರು ಕೊಡಲು ನಿರ್ಧರಿಸಿದ್ದು, ಆ ಸಮಯದಲ್ಲೇ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ.




