February 2, 2026

ಏಷ್ಯಾಕಪ್: ಶಾರ್ಜಾ ಮೈದಾನದಲ್ಲಿ ಕುರ್ಚಿಗಳಲ್ಲಿ ಹೊಡೆದಾಡಿಕೊಂಡ ಪಾಕಿಸ್ತಾನ- ಅಫ್ಘಾನಿಸ್ತಾನದ ಬೆಂಬಲಿಗರು

0
image_editor_output_image-563165437-1662615538630.jpg

ಶಾರ್ಜಾ: ಏಷ್ಯಾಕಪ್ ಸೂಪರ್ ಫೋರ್ ಹಂತದ ನಿರ್ಣಾಯಕ ಪಂದ್ಯದಲ್ಲಿ ಅಫ್ಗಾನಿಸ್ಥಾನ ತಂಡವು ಪಾಕಿಸ್ಥಾನ ವಿರುದ್ಧ ಸೋಲನುಭವಿಸಿದೆ.

ಅಂತಿಮ ಓವರ್ ನಲ್ಲಿ ನಸೀಂ ಶಾ ಬಾರಿಸಿದ ಎರಡು ಸಿಕ್ಸರ್ ನೆರವಿನಿಂದ ಪಾಕಿಸ್ಥಾನ ತಂಡವು ಏಷ್ಯಾ ಕಪ್ ಫೈನಲ್ ಗೇರಿದೆ. ರೋಮಾಂಚನಕಾರಿಯಾಗಿ ಸಾಗಿದ ಪಂದ್ಯದ ಬಳಿಕ ಉಭಯ ದೇಶಗಳ ಅಭಿಮಾನಿಗಳು ಹೊಡೆದಾಡಿಕೊಂಡ ಘಟನೆಯೂ ಬುಧವಾರ ರಾತ್ರಿ ನಡೆಯಿತು.

ಶಾರ್ಜಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡದ ಬೆಂಬಲಿಗರಲ್ಲಿ ಕೆಲವರು ಕುರ್ಚಿಗಳನ್ನು ಹಿಡಿದು ಹೊಡೆದಾಡಿಕೊಂಡರು.

ಏಷ್ಯಾಕಪ್‌ನಲ್ಲಿ ತಮ್ಮ ತಂಡ ಸೋತ ನಂತರ ಅಫ್ಘಾನ್ ಅಭಿಮಾನಿಗಳು ಪಾಕಿಸ್ತಾನಿ ಅಭಿಮಾನಿಗಳನ್ನು ಕ್ರೀಡಾಂಗಣದಲ್ಲಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

“ಅಫ್ಘಾನಿಸ್ಥಾನ್ ಜಿಂದಾಬಾದ್” ಎಂದು ಘೋಷಣೆ ಕೂಗಿದ ಅಭಿಮಾನಿಗಳು ಕ್ರೀಡಾಂಗಣದ ವಸ್ತಗಳನ್ನು ಹಾಳುಗೆಡವಿದ್ದಾರೆ.

Leave a Reply

Your email address will not be published. Required fields are marked *

error: Content is protected !!