March 25, 2026

ಹೆಲ್ಮೆಟ್ ಧರಿಸದ ಲೈನ್ ಮ್ಯಾನ್ ಗೆ 6 ಸಾವಿರ ರೂ. ದಂಡ ವಿಧಿಸಿದ ಪೊಲೀಸರು: ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸೇಡು ತೀರಿಸಿಕೊಂಡ ಲೈನ್ ಮ್ಯಾನ್

0
image_editor_output_image1581445008-1661410413500.jpg

ಲಕ್ನೋ: ಹೆಲ್ಮೆಟ್ ಧರಿಸದ ಲೈನ್ ಮ್ಯಾನ್ ಗೆ ಪೊಲೀಸರು ಆರು ಸಾವಿರ ರೂಪಾಯಿ ದಂಡ ವಿಧಿಸಿದ್ದ ಘಟನೆಯ ನಂತರ ಇದರಿಂದ ಆಕ್ರೋಶಗೊಂಡ ಲೈನ್ ಮ್ಯಾನ್ ಠಾಣಾ ಭವನ್ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸೇಡು ತೀರಿಸಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿರುವುದಾಗಿ ವರದಿ ವಿವರಿಸಿದೆ.

ಲೈನ್ ಮ್ಯಾನ್ ಮೊಹಮ್ಮದ್ ಮೆಹತಾಬ್ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

“ ನನ್ನ ತಿಂಗಳ ಸಂಬಳ 5,000 ಸಾವಿರ ರೂಪಾಯಿ. ಆದರೆ ಪೊಲೀಸರು ನನಗೆ ಹೆಲ್ಮೆಟ್ ಧರಿಸದಿರುವುದಕ್ಕೆ 6,000 ಸಾವಿರ ರೂ. ದಂಡ ವಿಧಿಸಿದ್ದಾರೆ. ಇನ್ನು ಮುಂದೆ ಹೀಗೆ ಮಾಡಲ್ಲ, ಇದೊಂದು ಬಾರಿ ಬಿಟ್ಟು ಬಿಡಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದೆ. ಆದರೆ ಅವರು ನನಗೆ ಯಾವುದೇ ಕರುಣೆ ತೋರಿಸದೇ ದಂಡ ವಿಧಿಸಿರುವುದಾಗಿ ಮೆಹತಾಬ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿರುವುದಾಗಿ ವರದಿ ಹೇಳಿದೆ.

Leave a Reply

Your email address will not be published. Required fields are marked *

error: Content is protected !!