February 3, 2026

ಮಿಜೋರಾಂ: ವೈದ್ಯರ ಮೇಲೆ ಹಲ್ಲೆ ನಡೆಸಿದ ಮುಖ್ಯಮಂತ್ರಿ ಮಗಳು

0
Naanu-Gauri.jpg

ಮಿಜೋರಾಂ: ಇಲ್ಲಿನ ಮುಖ್ಯಮಂತ್ರಿ ಝೋರಂತಂಗ ಅವರ ಮಗಳು ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ರಾಜ್ಯದ ರಾಜಧಾನಿ ಐಜ್ವಾಲ್‌ನಲ್ಲಿ ನಡೆದಿದೆ. ಘಟನೆಯ ವಿಡಿಯೊ ವೈರಲ್ ಆಗಿದ್ದು, ಘಟನೆಯ ಬಗ್ಗೆ ಮುಖ್ಯಮಂತ್ರಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ಐಜ್ವಾಲ್‌ನಲ್ಲಿ ಕ್ಲಿನಿಕ್‌ನ ಚರ್ಮರೋಗ ತಜ್ಞ ವೈದ್ಯರು ಅಪಾಯಿಂಟ್‌ಮೆಂಟ್ ಇಲ್ಲದ ಕಾರಣಕ್ಕೆ ನೋಡಲು ನಿರಾಕರಿಸಿದ್ದಕ್ಕಾಗಿ ಮುಖ್ಯಮಂತ್ರಿಯ ಮಗಳು ಮಿಲಾರಿ ಚಾಂಗ್ಟೆ ಅಸಮಾಧಾನಗೊಂಡು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಘಟನೆ ಬುಧವಾರ ನಡೆದಿದ್ದು, ಸಮಾಲೋಚನೆಗಾಗಿ ಕ್ಲಿನಿಕ್‌ಗೆ ಬರುವ ಮೊದಲು ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳುವಂತೆ ವೈದ್ಯರು ಮುಖ್ಯಮಂತ್ರಿಯ ಮಗಳನ್ನು ಕೇಳಿದ್ದರು.

ಇದೀಗ ಘಟನೆಯ ವಿಡಿಯೋ ವೈರಲ್ ಆಗಿದ್ದು, ಮುಖ್ಯಮಂತ್ರಿಯ ಮಗಳು ವೈದ್ಯರ ಬಳಿಗೆ ಹೋಗಿ ಹಲ್ಲೆ ನಡೆಸಿದ್ದು ಮತ್ತು ಇತರರು ಅವರನ್ನು ಹಿಡಿದಿಡಲು ಪ್ರಯತ್ನಿಸುತ್ತಿರುವುದು ವಿಡಿಯೊದಲ್ಲಿ ಕಾಣಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!