ಗುಜರಾತ್: ಪೊಲೀಸ್ ಠಾಣೆಯಲ್ಲಿ ಬೆಂಕಿ ತಗುಲಿ 25ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ
ಗುಜರಾತ್: ಖೇಡಾ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಶನಿವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅವಘಡದಲ್ಲಿ 25ಕ್ಕೂ ಹೆಚ್ಚು ಕಾರುಗಳು, ಆಟೋರಿಕ್ಷಾಗಳು ಮತ್ತು ಬೈಕ್‌ಗಳು ಸುಟ್ಟು ಭಸ್ಮವಾಗಿವೆ. ಖೇಡಾ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಕಿ ನಂದಿಸಲು ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದಾರೆ. ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಎಚ್ಚರಿಕೆಯ ಮೇರೆಗೆ ನಾಡಿಯಾಡ್ ಅಗ್ನಿಶಾಮಕ ದಳದ ತಂಡ ಮತ್ತು ಅಹಮದಾಬಾದ್, ಮೆಹಮದ್‌ವಾಡ್, ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಯಿಂದ ಅಗ್ನಿಶಾಮಕ ಟೆಂಡರ್‌ಗಳು ಸಹ ಬೆಂಕಿಯನ್ನು ನಂದಿಸುವ ಪ್ರಯತ್ನದಲ್ಲಿ ತೊಡಗಿವೆ. ಬಹಳ ಕಷ್ಟಪಟ್ಟು ತಂಡವು ಬೆಂಕಿಯನ್ನು ಹತೋಟಿಗೆ ತಂದಿತು.
ಸುಮಾರು 20 ಅಗ್ನಿಶಾಮಕ ವಾಹನಗಳು 4 ರಿಂದ 5 ಗಂಟೆಗಳ ಕಾಲ ಬೆಂಕಿಯನ್ನು ನಂದಿಸಲು ಹರಸಾಹಸ ಪಡಬೇಕಾಯಿತು.





