ಪುತ್ತೂರು: ಪುತ್ರಿಯ ಮದುವೆಗೆ ನಿಗದಿಯಾದ ದಿನದಂದೇ ತಂದೆ ನಿಧನ:
ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ಹಮೀದ್ ಮುಸ್ಲಿಯಾರ್
ಪುತ್ತೂರು: ಮಗಳ ಮದುವೆ ನಿಗದಿಯಾದ ದಿನದಂದೇ ತಂದೆ ಅನಾರೋಗ್ಯದಿಂದ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನಲ್ಲಿ ನಡೆದಿದೆ.
ಕಾಣಿಯೂರು ಸಮೀಪದ ಬೈತಡ್ಕ ಕಾಪೆಜಾಲು ಎಂಬಲ್ಲಿ ವಾಸವಾಗಿರುವ ಹಮೀದ್ ಮುಸ್ಲಿಯಾರ್ (53 ) ಮೃತಪಟ್ಟವರು.
ಮೃತ ಹಮೀದ್ ಮುಸ್ಲಿಯಾರ್ ಅವರ ಪುತ್ರಿಗೆ ನ.7 ರಂದು ಮದುವೆ ನಿಗದಿಯಾಗಿತ್ತು. ಅವರ ಅನಾರೋಗ್ಯ ಕಾರಣದಿಂದ ನಿಗದಿಯಾಗಿದ್ದ ಮದುವೆ ದಿನಾಂಕ ಮುಂದೂಡಲಾಗಿತ್ತು. ಮಗಳ ಮದುವೆ ದಿನಾಂಕದಂದೇ ತಂದೆ ಇಹಲೋಕ ತ್ಯಜಿಸಿದ್ದಾರೆ.
ಇತ್ತೀಚೆಗೆ ಅನಾರೋಗ್ಯಕ್ಕೀಡಾದ ಹಮೀದ್ ಮುಸ್ಲಿಯಾರ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರು ಇಹಲೋಕ ತ್ಯಜಿಸಿದ್ದಾರೆ. ಮೃತರು ಪತ್ನಿ ಓರ್ವ ಪುತ್ರ, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗದವರು ಇದ್ದಾರೆ.





