March 25, 2026

ಸ್ಕೂಟಿಗೆ ಟ್ಯಾಂಕರ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು: ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆ

0
image_editor_output_image-173596970-1660144233151

ಉಡುಪಿ: ಬುಧವಾರ ಸಂಜೆ ರಾಷ್ಟ್ರೀಯ ಹೆದ್ದಾರಿ ೬೬ ರ ಉದ್ಯಾವರ ಸೇತುವೆಯಲ್ಲಿ ಸ್ಕೂಟಿಗೆ ಟ್ಯಾಂಕರ್ ಢಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಸಹ ಸವಾರ ಪಾರಾದ ಘಟನೆ ನಡೆದಿದೆ.

ಮಲ್ಲಾರು ನಿವಾಸಿ ಅಲ್ಫಾಝ್ ಮೃತ ದುರ್ಧೈವಿ.

ಕಾಪುವಿನಿಂದ ಉಡುಪಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಉದ್ಯಾವರ ಸೇತುವೆಯಲ್ಲಿ ಟ್ಯಾಂಕರೊಂದು ಸ್ಕೂಟಿಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟಿ ಸವಾರ ಹೆದ್ದಾರಿಗೆ ಬಿದ್ದಿದ್ದು, ಟ್ಯಾಂಕರಿನ ಚಕ್ರವು ಸವಾರನ ತಲೆಯ ಮೇಲೆ ಹರಿದು, ಮೆದುಳು ರಸ್ತೆಯಲ್ಲಿ ಬಿದ್ದಿದೆ. ಸಹ ಸವಾರನಿಗೆ ಯಾವುದೇ ಗಾಯಗಳಾಗದೇ ಪಾರಾಗಿದ್ದಾರೆ.

ಸ್ಥಳಕ್ಕೆ ಕಾಪು ಪಿ.ಎಸ್.ಐ ಶ್ರೀಶೈಲ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಟ್ರಾಫಿಕ್ ಜಾಮ್

ಸಂಜೆ 7 ಗಂಟೆಯ ಸುಮಾರಿಗೆ ಅಪಘಾತ ಸಂಭವಿಸಿದ್ದು, ಹೆದ್ದಾರಿಯುದ್ದಕ್ಕೂ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು. ಕಾಪು ಪೋಲಿಸರು ಮತ್ತು ಸ್ಥಳೀಯರು ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.

Leave a Reply

Your email address will not be published. Required fields are marked *

error: Content is protected !!