March 25, 2026

ವಿಟ್ಲ: ಆ.13ರಂದು ವಿಟ್ಲ ಶೋಕಮಾತಾ ದೇವಾಲಯದ ಶತಮಾನೋತ್ಸವ ಸ್ಮಾರಕ ಸಮುದಾಯ ಭವನ ಲೋಕಾರ್ಪಣೆ

0
image_editor_output_image117945263-1660131639345

ವಿಟ್ಲ: ಶೋಕಮಾತಾ ದೇವಾಲಯ ವಿಟ್ಲ ಇದರ ಶತಮಾನೋತ್ಸವ ಸ್ಮಾರಕ ಸಮುದಾಯ ಭವನದ ಉದ್ಘಾಟನಾ ಸಮಾರಂಭ ಆಗೋಸ್ಟ್ 13ರ ಶನಿವಾರ ನಡೆಯಲಿದೆ.

ಬೆಳಿಗ್ಗೆ ಕೃತಜ್ಞತಾ ಬಲಿಪೂಜೆ ನಡೆದ ನಂತರ ಉದ್ಘಾಟನೆ ಹಾಗೂ ಆಶೀರ್ವಚನ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್ ಪ್ಲಾವ್ ಸಲ್ಡಾನ್ಹಾ ಮಾಡಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಂತ ರೀಟಾ ದೇವಾಲಯ, ಕಾಸ್ಸಿಯಾ ಧರ್ಮಗುರು ಎರಿಕ್ ಕ್ರಾಸ್ತ ವಹಿಸಲಿದ್ದಾರೆ.

ಅತಿಥಿಗಳಾಗಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲು, ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕರಾದ ಸಂಜೀವ ಮಠಂದೂರು, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾೈಕ್‌ ಉಳಿಪ್ಪಾಡಿಗುತ್ತು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್‌, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕರಾದ ಜೆ. ಆರ್. ಲೋಬೋ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಿ. ರಮಾನಾಥ ರೈ, ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಳ ಶೆಟ್ಟಿ, ಪಟ್ಟಣ ಪಂಚಾಯತ್ ವಿಟ್ಲದ ಸದಸ್ಯರಾದ ಅರುಣ್‌ ವಿಟ್ಲ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!