March 25, 2026

ಕರೋಪಾಡಿ: ಸಂತ ಲಾರೆನ್ಸ್ ವಾರ್ಷಿಕ ಹಬ್ಬ 2022

0
image_editor_output_image150268498-1660146433462

ವಿಟ್ಲ: ಸಂತ ಲಾರೆನ್ಸ್ ರ ವಾರ್ಷಿಕ ತಾರಿಕಿನ ಹಬ್ಬ ಸಂತ ಲಾರೆನ್ಸ್ ಚರ್ಚ್ ವಿಜಯಡ್ಕದಲ್ಲಿ ನಡೆಯಿತು. ಹರಕೆಯ ಪೂಜೆಗಳನ್ನು ನೀಡಿದ ಪ್ರತಿಯೊಬ್ಬರಿಗೂ ಮೊಂಬತ್ತಿಯನ್ನು ನೀಡಿ ಗೌರವಿಸಲಾಯಿತು. ಮಂಗಳೂರು ದಕ್ಷಿಣ ವಲಯದ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾ. ಸಿಪ್ರಿಯನ್ ಪಿಂಟೊ ಪ್ರಧಾನ ಬಲಿಪೂಜೆಯನ್ನು ಅರ್ಪಿಸಿ, ಪ್ರವಚನವನ್ನು ನೀಡಿದರು. ಅವಿಲ್ ವೇಗಸ್ ಬಲಿಪೂಜೆಯಲ್ಲಿ ಪಾಲ್ಗೊಂಡು, ಚರ್ಚ್ ನ ಧರ್ಮಗುರುಗಳು ವಂ. ಫಾ. ಎಡ್ವಿನ್ ಮೊನಿಸ್ ಬಲಿಪೂಜೆಯಲ್ಲಿ ಸಹಕರಿಸಿ, ಎಲ್ಲರಿಗೂ ಹಬ್ಬ ದ ಶುಭಾಶಯವನ್ನು ಕೋರಿದರು. ಹಲವಾರು ಭಕ್ತಾದಿಗಳು ಈ ಸಂಭ್ರಮದಲ್ಲಿ ಪಾಲ್ಗೊಂಡು ಸಂತ ಲಾರೆನ್ಸ್ ರ ಆಶಿರ್ವಾದಗಳನ್ನು ಬೇಡಿಕೊಂಡರು.

Leave a Reply

Your email address will not be published. Required fields are marked *

error: Content is protected !!