December 16, 2025

ಸಿಯೆರಾ ಲಿಯೋನ್‌ನಲ್ಲಿ ತೈಲ ಟ್ಯಾಂಕರ್ ಸ್ಫೋಟಗೊಂಡು ಕನಿಷ್ಠ 92 ಮಂದಿ ಮೃತ್ಯು, ಹಲವರಿಗೆ ಗಾಯ

0
1000x-1.jpg

ಫ್ರೀಟೌನ್: ಸಿಯೆರಾ ಲಿಯೋನ್‌ನ ರಾಜಧಾನಿ ಬಳಿ ತೈಲ ಟ್ಯಾಂಕರ್ ಸ್ಫೋಟಗೊಂಡಿದ್ದು, ಕನಿಷ್ಠ 92 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಸಿಯೆರಾ ಲಿಯೋನ್ ರಾಜಧಾನಿ ಬಳಿ ತೈಲ ಟ್ಯಾಂಕರ್ ಪಲ್ಟಿಯಾಗಿದ್ದು ತೈಲವನ್ನು ಸಂಗ್ರಹಿಸಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದು ಈ ವೇಳೆ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 92 ಮಂದಿ ಸಜೀವದಹನವಾಗಿದ್ದಾರೆ. ಅಲ್ಲದೆ 30 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಮೆಟ್ರೋಪಾಲಿಟನ್ ಪ್ರದೇಶದಾದ್ಯಂತ ರೋಗಿಗಳನ್ನು ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳಿಗೆ ಕರೆದೊಯ್ಯುವುದರಿಂದ ಎಷ್ಟು ಜನರು ಸುಟ್ಟಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದು ತಕ್ಷಣವೇ ತಿಳಿದಿಲ್ಲ.

ಫ್ರೀಟೌನ್‌ನ ಪೂರ್ವದ ಉಪನಗರವಾದ ವೆಲ್ಲಿಂಗ್‌ಟನ್‌ನಲ್ಲಿ ಕಳೆದ ರಾತ್ರಿ ಬಸ್ ಗೆ ಡಿಕ್ಕಿಯಾಗಿ ಟ್ಯಾಂಕರ್‌ ಪಲ್ಟಿಯಾಗಿತ್ತು. ಈ ವೇಳೆ ತೈಲ ಸಂಗ್ರಹಿಸಲು ಜನರು ಮುಗಿಬಿದ್ದಿದ್ದಾಗ ದುರಂತ ಸಂಭವಿಸಿದೆ.

ಕನ್ನಾಟ್ ಆಸ್ಪತ್ರೆಗೆ ಇಂದು ಬೆಳಿಗ್ಗೆ 92 ಶವಗಳನ್ನು ತರಲಾಗಿದೆ ಎಂದು ವರದಿಯಾಗಿದೆ. ಸಿಬ್ಬಂದಿ ಸದಸ್ಯ ಫೊಡೆ ಮೂಸಾ ಪ್ರಕಾರ, ಸುಮಾರು 30 ತೀವ್ರವಾಗಿ ಸುಟ್ಟ ಗಾಯಗಳಾಗಿದ್ದು ಅವರು ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ ಎಂದಿದ್ದಾರೆ.

ಘಟನೆ ಕುರಿತಂತೆ ಅಧ್ಯಕ್ಷ ಜೂಲಿಯಸ್ ಮಾದಾ ಬಯೋ, ‘ಭಯಾನಕ ಜೀವಹಾನಿ’ ಎಂದು ವಿಷಾದಿಸಿದರು. ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಮತ್ತು ದುರಂತದಲ್ಲಿ ಅಂಗವಿಕಲರಾದವರಿಗೆ ನನ್ನ ಆಳವಾದ ಸಹಾನುಭೂತಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!