November 23, 2026

ಮಂಗಳೂರು: ಅಪ್ರಾಪ್ತ ಬಾಲಕಿಗೆ ಜ್ಯೂಸ್ ನಲ್ಲಿ ಅಮಲು ಪದಾರ್ಥ ಸೇರಿಸಿ ಕುಡಿಸಿ ಅತ್ಯಾಚಾರ:
ಆರೋಪಿ ರೌಡಿ ಶೀಟರ್ ನ ಬಂಧನ

0
images-21.jpeg

ಮಂಗಳೂರು: ಅಪ್ರಾಪ್ತ ಯುವತಿಯೊಬ್ಬಳು ಮನೆಯಲ್ಲಿ ಒಬ್ಬಳೇ ಇದ್ದಾಗ ಆಕೆಯ ಮನೆಗೆ ಬಂದಿದ್ದ ರೌಡಿಶೀಟರ್ ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಿರುವ ಘಟನೆ ಕಂಕನಾಡಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹಳೆ ರೌಡಿಶೀಟರ್ ಮತ್ತು ಕೈಕಂಬದ ಹೊಟೇಲ್ ಒಂದರಲ್ಲಿ ಕುಕ್ ಆಗಿರುವ ನವೀನ್ ಸಿಕ್ವೇರಾ (34) ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ನವೀನ್ ಸಿಕ್ವೇರಾಗೆ ಯುವತಿಯ ಅಣ್ಣನ ಪರಿಚಯ ಇದ್ದುದರಿಂದ ಕೆಲವೊಮ್ಮೆ ಮನೆಗೆ ಬಂದು ಹೋಗುತ್ತಿದ್ದ. ಈ ವೇಳೆ, ಆತನ ತಂಗಿ 16 ವರ್ಷದ ಯುವತಿ ಮೇಲೆ ಕಣ್ಣು ಹಾಕಿದ್ದು, ಮೊಬೈಲ್ ನಂಬರ್ ಪಡೆದು ವಾಟ್ಸಪ್ ಚಾಟ್ ಮಾಡುತ್ತಿದ್ದ. ಎರಡು ದಿನಗಳ ಹಿಂದೆ ಆಕೆಯ ಮನೆಯಲ್ಲಿ ಯಾರೂ ಇರದೇ ಇರುವುದನ್ನು ತಿಳಿದು ಮನೆಗೆ ಬಂದಿದ್ದ. ಆನಂತರ, ಜ್ಯೂಸ್ ನಲ್ಲಿ ಮತ್ತು ಬರಿಸುವ ಅಮಲು ಪದಾರ್ಥ ಹಾಕಿಕೊಟ್ಟಿದ್ದು, ಆನಂತರ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಅತ್ಯಾಚಾರ ನಡೆಸಿದ್ದಾನೆ.

ಸಂಜೆ ಹೊತ್ತಿಗೆ ಯುವತಿಗೆ ವಿಷಯ ತಿಳಿದಿದ್ದು, ತಾಯಿ ಜೊತೆ ಮಂಗಳೂರಿನ ಮಹಿಳಾ ಠಾಣೆಗೆ ಬಂದು ದೂರು ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಪೋಕ್ಸೋ ಕೇಸು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!