February 1, 2026

ಸುಳ್ಯ: ಕೆರೆಗೆ ಬಿದ್ದ ಪುತ್ತೂರು ತಾಲೂಕಿನ ಯುವಕನ ಮೃತದೇಹ ಪತ್ತೆ:  
ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

0
IMG-20211106-WA0083

ಸುಳ್ಯ: ಪುತ್ತೂರು ತಾಲೂಕಿನ ಮಠತಡ್ಕ ಸಂಪ್ಯ ಮೂಲೆ ಎಂಬಲ್ಲಿಯ ಯುವಕರು ಆಟೋದಲ್ಲಿ ಸುಳ್ಯ ಬೆಳ್ಳಾರೆ ಸಮೀಪದ ನೆಟ್ಟಾರು ಮೊಗಪ್ಪೆ ಕೆರೆಯ ಬಳಿ ಬಂದಿದ್ದು ಅದರಲ್ಲಿ ಓರ್ವ ಯುವಕ ಕೆರೆಯ ನೀರಿನಲ್ಲಿ ಮುಳುಗಿ ರುವುದಾಗಿ ತಿಳಿದುಬಂದಿದೆ.

ಅಗ್ನಿಶಾಮಕ ದಳದವರು ಸತತ ಮೂರು ಗಂಟೆಗಳ ಕಾಲ ಹುಡುಕಾಟ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ ಎಂದು ತಿಳಿದುಬಂದಿದೆ. ಮೃತ ಯುವಕ ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಸಂಪ್ಯ ಮೂಲೆ ಸುಂದರ ಎಂಬವರ ಪುತ್ರ ಅವಿನಾಶ್ 26.ಎಂದು ಗುರುತಿಸಲಾಗಿದೆ.
ಯುವಕರು ಮೀನು ಹಿಡಿಯಲು ಬಂದಿರಬಹುದೆಂದು ಶಂಕಿಸಲಾಗಿದೆ. ಇದೀಗ ಮೃತಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.


ಕಾರ್ಯಾಚರಣೆಯಲ್ಲಿ ಪುತ್ತೂರು ಅಗ್ನಿಶಾಮಕದಳದ ಠಾಣಾಧಿಕಾರಿ ಸುಂದರ, ರುಕ್ಮಯ ಗೌಡ, ಮೋಹನ್ ಜಾದವ್, ಕುಶಾಲಪ್ಪ, ನಿಖಿಲ್, ಗೃಹರಕ್ಷಕ ದಳದ ಅಜಿತ್, ಸ್ಥಳೀಯ ಮುಳುಗು ತಜ್ಞ ಅಕ್ಷಯ, ಜಯಪ್ರಕಾಶ್ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!