March 26, 2026

ಉಡುಪಿ: ಶಾಲೆ ಬಿಟ್ಟು ಕಾಲು ಸಂಕ ದಾಟುತ್ತಿದ್ದ ಎರಡನೇ ತರಗತಿ ಬಾಲಕಿ ಹೊಳೆಗೆ ಬಿದ್ದು ಮೃತ್ಯು

0
image_editor_output_image1447704106-1659971433686

ಉಡುಪಿ: ಶಾಲೆ ಬಿಟ್ಟು ವಾಪಾಸಾಗುತ್ತಿದ್ದ 7ರ ಪ್ರಾಯದ ಬಾಲಕಿ ಮರದ ಕಾಲು ಸಂಕ ದಾಟುತ್ತಿದ್ದಾಗ ಹೊಳೆಗೆ ಜಾರಿ ಬಿದ್ದು ನಾಪತ್ತೆಯಾದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬಿಜಮಕ್ಕಿ ನಡೆದಿದೆ.

ಸನ್ನಿಧಿ (7 ) ನೀರುಪಾಲಾದ ಬಾಲಕಿ
ಚಪ್ಪರಿಕೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿಯ ಕಲಿಯುತ್ತಿದ್ದ ಸನ್ನಿಧಿ ಇಂದು ಸಂಜೆ ಶಾಲೆ ಬಿಟ್ಟು ಮನೆಗೆ ಬರುತ್ತಿರುವಾಗ ದಾರಿ ಮಧ್ಯೆಯ ಮರದ ಕಾಲು ಸಂಕ ದಾಟುತ್ತಿದ್ದಾಗ ರಭಸದಿಂದ ಹರಿಯುತ್ತಿದ್ದ ಹೊಳೆಗೆ ಬಿದ್ದಿದ್ದಾಳೆ. ಸದ್ಯ ನೀರಿನಲ್ಲಿ ಕೊಚ್ಚಿ ಹೋದ ಬಾಲಕಿಗಾಗಿ ಊರವರ ಹುಡುಕಾಟ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!