March 26, 2026

ವಿಟ್ಲ: ಜೋಕಾಲಿಯ ಹಗ್ಗ ಕುತ್ತಿಗೆಗೆ ಸಿಲುಕಿ ಆರನೇ ತರಗತಿ ವಿದ್ಯಾರ್ಥಿನಿ ಮೃತ್ಯು

0
65867100

ವಿಟ್ಲ: ವಿಟ್ಲ: ಜೋಕಾಲಿಯ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕಿ ಸಾವನ್ನಪ್ಪಿದ ಘಟನೆ ಅನಂತಾಡಿಯಲ್ಲಿ ನಡೆದಿದೆ.

ಅನಂತಾಡಿ ಗ್ರಾಮದ ಬಂಟ್ರಂಜ ನಿವಾಸಿ ಶೇಖರ ಅವರ ಪುತ್ರಿ, ಬಾಬನಕಟ್ಟೆ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ
ಲಿಖಿತಾ ಪ್ರಾಯ(11) ಮೃತಪಟ್ಟ ಬಾಲಕಿ

ಲಖಿತಾ ಶಾಲೆಗೆ ಹೋಗದೇ ಮನೆಯಲ್ಲಿದ್ದಳು. ಮನೆಯಲ್ಲಿ ಮಗಳು ಜೋಕಾಲಿಯಾಡುತ್ತಿದ್ದು, ಸಂಜೆ ತಂದೆ ಶೇಖರ ಮತ್ತು ಪತ್ನಿ ಚಂದ್ರವತಿ ಅವರು ಹೊರಗಡೆ ಹೋಗಿದ್ದರು.

ತಾಯಿ ವಾಪಾಸ್ಸು ಬಂದಾಗ ಲಿಖಿತಾ ಕುತ್ತಿಗೆಗೆ ಜೋಕಾಲಿ ಸುತ್ತಿ ನೇತಾಡುತ್ತಿದ್ದನ್ನು ಕಂಡು ಹೋದು ಬೊಬ್ಬೆ ಹಾಕಿದಾಗ ನೆರೆಕರೆಯವರು ಬಂದು ಜೋಕಾಲಿಯ ಸೀರೆಯಿಂದ ಲಖಿತಾಳನ್ನು, ಬಿಡಿಸಿದಾಗ ಮೃತಪಟ್ಟಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೃತ ಬಾಲಕಿ ತಂದೆ-ತಾಯಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!