February 4, 2026

ಪಡುಬಿದ್ರಿ: ಪ್ರೀತಿಸಿ ಮದುವೆಯಾಗಿದ್ದ ಯುವಜೋಡಿ ನಾಪತ್ತೆ

0
image_editor_output_image2130078137-1659955904335.jpg

ಪಡುಬಿದ್ರಿ: ಸುಮಾರು ಎರಡೂವರೆ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ದಂಪತಿಗಳು ನಾಪತ್ತೆಯಾಗಿರುವ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ. 1ರಂದು ಶಿಫಾಶೇಖ್‌ (25) ಹಾಗೂ ರಿಯಾಜ್‌ (28) ನಂದಿಕೂರು-ಅಡ್ವೆಯ ಮನೆಯಿಂದ ಉಡುಪಿಗೆ ಮೊಬೈಲ್‌ ಖರೀದಿಸಿ ಬರುವುದಾಗಿ ಹೇಳಿ ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ.

ಇನ್ನು ರಿಯಾಜ್‌ ಮಣಿಪಾಲದ ಮೊಬೈಲ್‌ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದರು. ಶಿಫಾ ಶೇಖ್‌ ತಂದೆ-ತಾಯಿ ಮದುವೆಗೆ ಮುಂಚೆ ತೀರಿಕೊಂಡಿದ್ದು, ಆ ವೇಳೆ ಬಿಎಎಂಎಸ್‌ ಕಡೆಯ ವರ್ಷದಲ್ಲಿ ಕಲಿಯುತ್ತಿದ್ದ ಈಕೆಯು ವಿದ್ಯಾಭ್ಯಾಸ ಮೊಟಕುಗೊಳಿಸಿ ರಿಯಾಜ್‌ ಅವರನ್ನು ವಿವಾಹವಾಗಿದ್ದರು.

ಇನ್ನು ಇತ್ತೀಚೆಗಷ್ಟೇ ಶಿವಮೊಗ್ಗಕ್ಕೆ ಸಂಬಂಧಿಕರ ಮನೆಗೆ ಹೋಗಿದ್ದಾಗ ಎರಡೂವರೆ ತಿಂಗಳ ಅವರ ಮಗುವೂ ತೀರಿಕೊಂಡಿತ್ತು ಎಂದು ತಿಳಿದು ಬಂದಿದೆ.

ರಿಯಾಜ್‌ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದು, ಶಿಫಾ ಮೊಬೈಲ್ ಮನೆಯಲ್ಲೇ ಇದೆ ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!