August 25, 2026

ಉದ್ಯೋಗ ಸಿಗಲಿಲ್ಲವೆಂದು ಮನನೊಂದು ಯುವಕ ನೇಣು ಬಿಗಿದು ಆತ್ಮಹತ್ಯೆ

0
image_editor_output_image156713898-1659775247361.jpg

ಬೆಂಗಳೂರು: ಸರಿಯಾದ ಉದ್ಯೋಗ ಸಿಗಲಿಲ್ಲ ಎಂದು ಮನನೊಂದು ಯುವಕನೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಯಗವದೇವಪಲ್ಲಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಯಗವದೇವಪಲ್ಲಿಯ ಶ್ರೀಕಾಂತ್ (30) ನೇಣಿಗೆ ಶರಣಾದ ಯುವಕನಾಗಿದ್ದಾನೆ.

ಮೃತ ಶ್ರೀಕಾಂತ್ ಬಿ.ಕಾಂ ವ್ಯಾಸಂಗ ಮಾಡಿದ್ದು, ಕೋವಿಡ್ ನಂತರ ಉದ್ಯೋಗಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದಾನೆ. ಆದರೆ, ವಿದ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗ ಸಿಗದ ಹಿನ್ನೆಲೆ ಖಿನ್ನತೆಗೆ ಒಳಗಾಗಿದ್ದ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!