August 25, 2026

ಮಹಿಳೆಗೆ ಹಲ್ಲೆ: ಬಿಜೆಪಿ ನಾಯಕನ ಬಂಧನಕ್ಕೆ ರಾಷ್ಟ್ರೀಯ ಮಹಿಳಾ ಆಯೊಗ ಆಗ್ರಹ

0
image_editor_output_image1259121928-1659774715601.jpg

ಲಖನೌ: ನೋಯ್ಡಾದ ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆಯೊಬ್ಬರ ಮೇಲೆ ಕೈ ಮಾಡಿದ ಬಿಜೆಪಿ ನಾಯಕನನ್ನು ತತ್‌ಕ್ಷಣ ಬಂಧಿಸಿ ವಿಚಾರಣೆಗೊಳಪಡಿಸಬೇಕೆಂದು ರಾಷ್ಟ್ರೀಯ ಮಹಿಳಾ ಆಯೊಗ ಆಗ್ರಹಿಸಿದೆ.

ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ಅವರು ನೊಯ್ಡಾ ಸೆಕ್ಟರ್-93ಬಿನಲ್ಲಿರುವ ಗ್ರಾಂಡ್ ಒಮ್ಯಾಕ್ಸಿ ಸೊಸೈಟಿಯ ಮಹಿಳಾ ನಿವಾಸಿಯೊಬ್ಬರನ್ನು ನಿಂದಿಸಿ, ಹಲ್ಲೆ ಮಾಡಿದ್ದಾರೆಂದು ಶುಕ್ರವಾರ ನೊಯ್ಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆದರೆ ಈವರೆಗೆ ಅವರ ಬಂಧನ ಆಗಿಲ್ಲ. ಹೀಗಾಗಿ ನಾಯಕನ ವಿರುದ್ದ ಎಫ್‌ಐಆರ್‍ ದಾಖಲಿಸಿ ಶೀಘ್ರ ಬಂಧಿಸಬೇಕು. ಅಲ್ಲದೆ, ಪಾರದರ್ಶಕ ತನಿಖೆ ನಡೆಸಬೇಕು ಎಂದು ಎನ್ಸಿಡಬ್ಲ್ಯು ಮುಖ್ಯಸ್ಥೆ ರೇಖಾ ಶರ್ಮಾ ಅವರು ಉತ್ತರ ಪ್ರದೇಶದ ಡಿಜಿಪಿಯವರನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!