ಶಿವಮೊಗ್ಗ: ಬಾಟಲಿ, ಕಲ್ಲಿನಿಂದ ತಲೆಗೆ ಹೊಡೆದು ಯುವಕನ ಹತ್ಯೆ
ಶಿವಮೊಗ್ಗ: ಬಾಟಲಿ ಮತ್ತು ಕಲ್ಲಿನಿಂದ ತಲೆಗೆ ಹೊಡೆದು ಯುವಕನನ್ನು ಹತ್ಯೆ ಮಾಡಲಾಗಿದೆ. ಮದ್ಯ ಸೇವನೆ ಮಾಡಿ, ಜಗಳ ತೆಗೆದುಕೊಂಡು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗಾಡಿಕೊಪ್ಪದಲ್ಲಿ ಘಟನೆ ಸಂಭವಿಸಿದೆ. ಹೊಸಮನೆ ಬಡಾವಣೆಯ ಕಿರಣ ಅಲಿಯಾಸ್ ಪುಚ್ಚಿ (23) ಎಂಬಾತನನ್ನು ಹತ್ಯೆ ಮಾಡಲಾಗಿದೆ. ಹೊಸಮನೆ ಬಡಾವಣೆಯ ಪ್ರಜ್ವಲ್ ಮತ್ತು ಗಾಡಿಕೊಪ್ಪದ ಕಾರ್ತಿಕ್ ಹತ್ಯೆ ಮಾಡಿದ್ದಾರೆ.




