ನಟಿಯೊಂದಿಗಿನ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದ ಕೆ.ಎಲ್.ರಾಹುಲ್
ಮುಂಬೈ: ಭಾರತ ಕ್ರಿಕೆಟ್ ತಂಡದ ಬಲಗೈ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಮತ್ತು ಬಾಲಿವುಡ್ ನಟಿ ಹಾಗೂ ಸುನಿಲ್ ಶೆಟ್ಟಿ ಅವರ ಪುತ್ರಿ ಆಥಿಯಾ ಶೆಟ್ಟಿ ನಡುವಣ ಡೇಟಿಂಗ್ ಗಾಸಿಪ್‌ಗೆ ಇದೀಗ ತೆರೆಬಿದ್ದಿದೆ.
ಕೆ.ಎಲ್.ರಾಹುಲ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದು, ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ.
ತಿಂಗಳುಗಳ ಊಹಾಪೋಹಗಳ ನಂತರ, ಆಥಿಯಾ ಅವರ ಜನ್ಮದಿನದಂದು ಕೆ.ಎಲ್.ರಾಹುಲ್ ನಟಿಯೊಂದಿಗಿನ ಫೋಟೊಗಳನ್ನು ರೊಮ್ಯಾಂಟಿಕ್ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಆಥಿಯಾ ಶೆಟ್ಟಿ ಜೊತೆಗಿನ ಎರಡು ಫೋಟೊಗಳನ್ನು ಹಂಚಿಕೊಂಡಿದ್ದು, ‘ಹುಟ್ಟು ಹಬ್ಬದ ಶುಭಾಶಯಗಳು ನನ್ನ ಪ್ರೀತಿಯ ಆಥಿಯಾ ಶೆಟ್ಟಿ’ ಎಂದು ಬರೆದಿದ್ದಾರೆ.





