December 19, 2025

‘ಆಕ್ಟ್-1978′ ಸೇರಿ ನಾಲ್ಕು ಸಿನಿಮಾಗಳು ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆ

0
image_editor_output_image1846769171-1636175935538.jpg

ಬೆಂಗಳೂರು: ಲಾಕ್‌ಡೌನ್‌ ತೆರವಿನ ಬಳಿಕ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಕನ್ನಡಿಗರ ಮನಗೆದ್ದಿರುವ ‘ಆಕ್ಟ್-1978′ ಸೇರಿ ನಾಲ್ಕು ಸಿನಿಮಾಗಳು ಭಾರತ ಸರಕಾರ ಆಯೋಜಿಸುವ ಪ್ರತಿಷ್ಟಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿವೆ.

‘ಹರಿವು’, ‘ನಾತಿಚರಾಮಿ’ ಸಿನಿಮಾಗಳ ನಿರ್ದೇಶಕರಾದ ಮಂಸೋರೆಯವರ ‘ಆಕ್ಟ್‌‌- 1978′, ಅಕಾಲಿಕ ಮರಣದಕ್ಕೆ ತುತ್ತಾದ ನಟ ಸಂಚಾರಿ ವಿಜಯ್‌ ಅಭಿನಯದ ಕೊನೆಯ ಸಿನಿಮಾ ‘ತಲೆದಂಡ’, ನಿರ್ದೇಶಕ ಪವನ್ ಒಡೆಯರ್ ನಿರ್ಮಾಣದ ‘ಡೊಳ್ಳು’ (ನಿರ್ದೇಶಕ ಸಾಗರ್‌ ಪುರಾಣಿಕ್‌), ಗಣೇಶ್‌ ಹೆಗಡೆ ನಿರ್ದೇಶನದ ‘ನೀಲಿ ಹಕ್ಕಿ’ ಸಿನಿಮಾಗಳು ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿವೆ.

ನಿರ್ದೇಶಕ ಮಂಸೋರೆಯವರು ಈ ಕುರಿತು ಫೇಸ್‌ಬುಕ್‌ ಪೋಸ್ಟ್‌ ಹಾಕಿದ್ದು, ಅಪಘಾತದಲ್ಲಿ ನಿಧನರಾದ ಸಂಚಾರಿ ವಿಜಯ್ ಅವರನ್ನು ನೆನೆದಿದ್ದಾರೆ. “ಸಂಚಾರಿ ವಿಜಯ್‌ ಸರ್ ಅಭಿನಂದನೆಗಳು. ನೀವು ನಟಿಸಿರುವ ಎರಡು ಸಿನೆಮಾಗಳು ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿದೆ. ನಿಮ್ಮೊಂದಿಗೆ ಹಂಚಿಕೊಂಡಿದ್ದ ದೀರ್ಘಕಾಲದ ಕನಸೊಂದು ಇಂದು ನನಸಾಗಿದೆ” ಎಂದಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!