ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪತ್ನಿ ನೇಣು ಬಿಗಿದು ಆತ್ಮಹತ್ಯೆ
ಬೆಂಗಳೂರು: ಹಾವೇರಿ ಜಿಲ್ಲೆಯ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ (ಪ್ರಭಾರ) ಪ್ರೊ. ಸಿ.ಟಿ. ಗುರುಪ್ರಸಾದ್ ಅವರ ಪತ್ನಿ ಎಚ್.ಕೆ. ಚೈತ್ರಾ (41) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಜ್ಞಾನಭಾರತಿ ಠಾಣೆಯಲ್ಲಿ ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಾಗಿದೆ.
‘ಜ್ಞಾನಭಾರತಿ ಬಳಿಯ ಕದಂಬ ಬಡಾವಣೆ ನಿವಾಸಿ ಚೈತ್ರಾ ಅವರು ಸೋಮವಾರ ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಸಹೋದರ ಡಾ. ಶರತ್ ಬಾಬು ದೂರು ನೀಡಿದ್ದಾರೆ.
ಯುಡಿಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು. ‘ಚೈತ್ರಾ, ಗುರುಪ್ರಸಾದ್, 23 ವರ್ಷಗಳ ಹಿಂದೆ ಮದುವೆಯಾಗಿದ್ದರು.
ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕದಂಬ ಬಡಾವಣೆಯಲ್ಲಿ ಕುಟುಂಬ ವಾಸವಿತ್ತು. ಕೆಲಸದ ನಿಮಿತ್ತ ಗುರುಪ್ರಸಾದ್ ಹಾವೇರಿಯಲ್ಲಿ ನೆಲೆಸಿದ್ದರು’ ಎಂದು ಹೇಳಿದರು.




