August 25, 2026

ವಿಟ್ಲ: ರಸ್ತೆಯಲ್ಲಿ ತೆರಳುತ್ತಿದ್ದ ಯುವಕನಿಗೆ ಅಡ್ಡ ಬಂದ ಚಿರತೆ: ಸಾರ್ವಜನಿಕರಲ್ಲಿ ಆತಂಕ

0
IMG-20220719-WA0012.jpg

ವಿಟ್ಲ: ರಸ್ತೆಯಲ್ಲಿ ತೆರಳುತ್ತಿದ್ದ ಯುವಕನಿಗೆ ಚಿರತೆ ಅಡ್ಡ ಬಂದ ಘಟನೆ ವಿಟ್ಲ-ಸಾಲೆತ್ತೂರು ರಸ್ತೆಯಲ್ಲಿ ನಡೆದಿದೆ.

ಕುಡ್ತಮುಗೇರಿಗೆ ನಡೆದು ಬರುತ್ತಿದ್ದ ಯುವಕನಿಗೆ ನೀರಪಳಿಕೆ ಎಂಬಲ್ಲಿ ಚಿರತೆ ಅಡ್ಡ ಬಂದಿದೆ ಎನ್ನಲಾಗಿದೆ. ಸ್ಥಳದಲ್ಲಿ ಸಾರ್ವಜನಿಕರು ಜಮಾವಣೆಗೊಂಡಿದ್ದು, ಅರಣ್ಯ ಅಧಿಕಾರಿಗಳು ಕೂಡ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಎರಡು ದಿನಗಳ ಹಿಂದೆಯೂ ಚಿರತೆ ಓಡಾಡುತ್ತಿದೆ ಎನ್ನಲಾಗಿದ್ದು, ಇದೀಗ ಚಿರತೆ ಮತ್ತೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡಿದೆ.

Leave a Reply

Your email address will not be published. Required fields are marked *

You may have missed

error: Content is protected !!