July 6, 2026

ಮಡಿಕೇರಿ – ಮಂಗಳೂರು ಹೈವೇ ಯಲ್ಲಿ ವಾಹನ ಚಾಲಕರ ಪರದಾಟ

0
IMG-20220717-WA0013.jpg

ಮಡಿಕೇರಿ: ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ಮಾಣಿ ಮೈಸೂರು ರಸ್ತೆಯಲ್ಲಿ ನಿರ್ಮಾಣಗೊಂಡಿರುವ ತಡೆಗೋಡೆ ಕುಸಿತದ ಭೀತಿಯಲ್ಲಿ ಇದ್ದು ಮಡಿಕೇರಿ ಮಂಗಳೂರು ರಸ್ತೆಯನ್ನು ಪರ್ಯಾಯ ರಸ್ತೆಗೆ ಮಾರ್ಪಾಡುಗೊಳಿಸಲಾಗಿದೆ.

ಇದೀಗ ಮಡಿಕೇರಿ – ಮೇಕೇರಿ ರಸ್ತೆಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ಗಂಟೆಗೂ ಹೆಚ್ಚುಕಾಲ ನಿಂತು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರ್ಯಾಯ ಮಾರ್ಗವಾಗಿರುವ ತಾಳತ್ತಮನೆಯಿಂದ ಅಪ್ಪಂಗಳದ ವರೆಗೆ ಇರುವ ರಸ್ತೆ ಕಿರಿದಾಗಿದ್ದು, ಎರಡು ಕಡೆಗಳಿಂದ ವಾಹನಗಳಿಗೆ ಓಡಾಡಲು ಕಷ್ಟ ಸಾಧ್ಯವಾಗುತ್ತಿದೆ.

ಚಾಲಕರ ಪರದಾಟ, ಪ್ರಯಾಣಿಕರ ಒದ್ದಾಟ, ಸ್ಥಿತಿ ನಿಭಾಯಿಸಲು ಮಳೆಯಲ್ಲಿಯೂ ಸಂಚಾರಿ ಪೋಲಿಸರು ಹರ ಸಾಹಸ ಪಡುತ್ತಿರುವ ದೃಶ್ಯ ಕಂಡು ಬರುತ್ತಿದೆ. ಆದ್ದರಿಂದ ವಿನಾಕಾರಣ ಈ ಭಾಗದ ರಸ್ತೆಯಲ್ಲಿ ತೆರಳುವ ವಾಹನ ಸವಾರರು ನೂರು ಬಾರಿ ಯೋಚಿಸಿ ಬರಬೇಕಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!