ಕೊಡಗು: ಕುಲದೇವಿ ಕಾವೇರಿ ಮತ್ತು ಕೊಡವ ಹೆಣ್ಣುಮಕ್ಕಳನ್ನು ಅವಮಾನಿಸಿ ಪೋಸ್ಟ್ ಹಾಕಿದ್ದ ಯುವಕ ಅರೆಸ್ಟ್:
ಮಡಿಕೇರಿ: ಕೊಡಗಿನ ಕುಲದೇವಿ ಕೊಡಗಿನ ಆರಾಧ್ಯ ದೇವತೆ ಕಾವೇರಮ್ಮ ಮಾತೆ ಮತ್ತು ಕೊಡವ ಸಮುದಾಯದ ಹೆಣ್ಣು ಮಕ್ಕಳನ್ನು ಮುಸ್ಲಿಮ್ ಯುವಕನೋರ್ವನ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಅವಮಾನ ಮಾಡಿ ನಿಂದಿಸಿರುವ ಪೋಸ್ಟ್ ಹಾಕಿದ ಯುವಕನೋರ್ವನನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಇನ್ಸ್ಟಾಗ್ರಾಂ ಫೇಕ್ ಅಕೌಂಟ್ ಸೃಷ್ಟಿ ಮಾಡಿದ್ದು ಹಿಂದೂ ಯುವಕ ಎಂದು ತಿಳಿದು ಬಂದಿದೆ.
ಸಿದ್ದಾಪುರದ ಯುವಕ ಮೊಹಮದ್ ಅಷ್ಫಾಕ್ ಎಂಬ ವಿದ್ಯಾರ್ಥಿಯ ಹೆಸರಿನಲ್ಲಿ ತಾಯಿ ಕಾವೇರಿ ಮತ್ತು ಕೊಡವ ಹೆಣ್ಣು ಮಕ್ಕಳ ಬಗ್ಗೆ ಪೋಸ್ಟ್ ವೈರಲ್ ಆದ ನಂತರ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತಗೊಂಡು ಪ್ರತಿಭಟನೆಯ ಹಾದಿ ಮತ್ತು ನೈಜ ಅಪರಾಧಿಯನ್ನು ಬಂಧಿಸಬೇಕೆಂಬ ಒತ್ತಾಯ ಹೆಚ್ಚಾಗಿತ್ತು. ಕೊಡಗಿನ ಪೊಲೀಸರು ಅಪರಾಧಿಯನ್ನು ಪತ್ತೆ ಹಚ್ಚುವ ಉದ್ದೇಶದಿಂದ ಫೇಸ್ ಬುಕ್ ಮುಂಬೈ ಕಚೇರಿ ಬಳಿಕ ಕ್ಯಾಲಿಫೋರ್ನಿಯಾದಲ್ಲಿರುವ ಮುಖ್ಯ ಕಚೇರಿ ಸಂಪರ್ಕಿಸಿ ನೈಜ ಆರೋಪಿಯನ್ನು ಬಂಧಿಸಿದ್ದಾರೆ.
ಅಪರಾಧಿ ಯುವಕ ವಿರಾಜಪೇಟೆ ಸಮೀಪದ ಕೆದಮುಳ್ಳೂರ ಸಮೀಪ ನಿವಾಸಿ ದಿವಿನ್ ದೇವಯ್ಯ ಎನ್ನಲಾಗಿದ್ದು ಮನೆ ಹೆಸರು ಇನ್ನಷ್ಟೇ ತಿಳಿಯಬೇಕಿದೆ.





