ವಿಟ್ಲದಲ್ಲಿ ನೂತನವಾಗಿ ಜೀಲು ಆಟೋ ಗ್ಯಾಸ್(ಎಲ್ ಪಿ ಜಿ) ಪಂಪ್
ವಿಟ್ಲ: ವಿಟ್ಲದ ಬೊಬ್ಬೆಕೇರಿಯ ಶಾಂತಿನಗರದಲ್ಲಿ ಜೀಲು ಆಟೋ ಗ್ಯಾಸ್ ಪಂಪ್ ಶುಭಾರಂಭಗೊಂಡಿತು.
ವಿಟ್ಲ ಶೋಕ ಮಾತೆಯ ದೇವಾಲಯದ ಧರ್ಮಗುರು ಐವನ್ ಮೈಕಲ್ ರೋಡ್ರಿಗಸ್ , ವಿಟ್ಲ ಅರಮನೆಯ ಬಂಗಾರು ಅರಸರು, ವಿಟ್ಲ ಕೇಂದ್ರ ಜುಮ್ಮಾ ಮಸೀದಿಯ ಧರ್ಮಗುರು ಮೊಹಮ್ಮದ್ ನಸೀಹ್ ಅಲ್ ದಾರಿಮಿ ಮತ್ತು ಕರ್ನಾಟಕ ಇಂಡಿಯನ್ ಆಯಿಲ್ ಪೆಟ್ರೋಲ್ ಲಿಮಿಟೆಡ್ ನ ರೀಜಿನಲ್ ಸೇಲ್ಸ್ ಆಫೀಸರ್ ರೂಪೇಶ್ ಎಂ
ಅವರು ನೂತನ ಪಂಪ್ ಅನ್ನು ಉದ್ಘಾಟಿಸಿದರು.
ವಿಟ್ಲ ಶೋಕ ಮಾತೆಯ ದೇವಾಲಯದ ಧರ್ಮಗುರು ಐವನ್ ಮೈಕಲ್ ರೋಡ್ರಿಗಸ್ ಮಾತನಾಡಿ
ವಿಟ್ಲ ಭಾಗದ ಬಹುತೇಕ ಆಟೋ ಚಾಲಕರು ಅನಿಲ ತುಂಬಿಸಲು ದೂರದ ಪ್ರದೇಶಗಳಿಗೆ ಹೋಗಬೇಕಾಗುತ್ತದೆ. ಸುನೀಲ್ ಮತ್ತು ಸೌಮ್ಯ ಮಾಲಕತ್ವದಲ್ಲಿ ಇಲ್ಲಿ ನೂತನವಾಗಿ ಪ್ರಾರಂಭಗೊಂಡ ಆಟೋ ಎಲ್ ಪಿ ಜಿ ಅನಿಲ ಪಂಪ್ ನಿಂದ ಆಟೋ ಚಾಲಕರು ಸೇರಿದಂತೆ ಎಲ್ಲರೂ ಸಂತಸಗೊಂಡಿದ್ದಾರೆ.
ವಿಟ್ಲ ಅರಮನೆಯ ಬಂಗಾರು ಅರಸರು ಮಾತನಾಡಿ ಇಂದು ವಿಟ್ಲದ ಜನತೆಗೆ ಖುಷಿಯ ದಿನವಾಗಿದೆ. ಬಹಳ ವರ್ಷಗಳ ಬೇಡಿಕೆ, ಮತ್ತು ಕನಸು ನನಸಾಗಿದೆ. ಇದರಿಂದ ಇನ್ನಷ್ಟ ಪ್ರಯೋಜನವಾಗಲಿದೆ ಎಂದು ಶುಭ ಹಾರೈಸಿದರು.
ವಿಟ್ಲ ಕೇಂದ್ರ ಜುಮ್ಮಾ ಮಸೀದಿಯ ಧರ್ಮಗುರು ಮೊಹಮ್ಮದ್ ನಸೀಹ್ ಅಲ್ ದಾರಿಮಿ ವಿಟ್ಲದಲ್ಲಿ ಇಂತಹ ಒಂದು ಪಂಪ್ ಜನರಿಗೆ ಅತ್ಯಾವಶ್ಯಕವಾಗಿತ್ತು. ಇದೀಗ ಪ್ರಾರಂಭಗೊಂಡಿದ್ದು, ಯಶಸ್ಸುಗೊಳ್ಳಲಿ ಎಂದು ಶುಭ ಹಾರೈಸಿದರು.
ವಿಟ್ಲದ ಆಟೋ ಚಾಲಕರು, ಮತ್ತು ಸಾರ್ವಜನಿಕರು ಈ ಪಂಪ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು. ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಲಾಯಿತು.
ಜಾಗದ ಮಾಲಕ ಗಂಗಾಧರ್, ಕಟ್ಟಡ ಕಾಮಗಾರಿಯ ಎಂಜಿನಿಯರ್ ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ, ರವಿಕುಮಾರ್, ಪಂಪ್ ನ ಮಾಲಕರಾದ ಸುನೀಲ್ ಝೇವಿಯರ್ ಮತ್ತು ಸೌಮ್ಯ ಝೇವಿಯರ್, ಸುಜೀತ್ ಕುಮಾರ್ ಗಟ್ಟಿ ಉಪಸ್ಥಿತರಿದ್ದರು.






