ಮಡಿಕೇರಿ ರಸ್ತೆ ಭೂಕುಸಿತ ಉಂಟಾಗುವ ಮುಂಜಾಗ್ರತಾ ಕ್ರಮವಾಗಿ ಸುಳ್ಯ ಮಾರ್ಗದ ಘನ ವಾಹನಗಳಿಗೆ ಸಂಚಾರ ನಿರ್ಬಂಧ: ಸುಳ್ಯ ಪೊಲೀಸ್ ಪ್ರಕಟಣೆ
ಮಡಿಕೇರಿ: ಜಿಲ್ಲಾಧಿಕಾರಿ ಕಚೇರಿಯ ಕೆಳ ಭಾಗದಲ್ಲಿ ತಡೆಗೋಡೆ ಕುಸಿಯುವ ಆತಂಕ ಇರುವುದರಿಂದ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಸುಳ್ಯ – ಮಂಗಳೂರು ರಸ್ತೆ ಸಂಚಾರ ಬಂದ್ ಮಾಡಲಾಗಿದೆ.
ಮಡಿಕೇರಿಯಿಂದ ಮಂಗಳೂರಿಗೆ ತೆರಳುವವರು ಮತ್ತು ಮಡಿಕೇರಿಗೆ ಮಂಗಳೂರಿನಿಂದ ಬರುವವರು ಮೇಕೆರಿ -ತಾಳತ್ತಮನೆ- ಅಪ್ಪಂಗಳ ಮಾರ್ಗವಾಗಿ ಸಾಗುವಂತೆ ಸೂಚನೆ ನೀಡಲಾಗಿದೆ.
ಈ ಮಾರ್ಗಗಳಲ್ಲಿ ಕೇವಲ ಬಸ್ಸು ಇನ್ನಿತರ ಅವಶ್ಯಕ ವಾಹನಗಳ ಸಂಚಾರ ಹೊರತುಪಡಿಸಿ ಬೇರೆ ಯಾವುದೇ ಸರಕು ಸಾಗಾಣಿಕೆಗಳ ಘನವಾಹನಗಳಿಗೆ ಅವಕಾಶ ನೀಡಿರುವುದಿಲ್ಲ.
ಆದ್ದರಿಂದ ಮುಂಜಾಗ್ರತ ಕ್ರಮವಾಗಿ ಈ ರಸ್ತೆಗಳಲ್ಲಿ ಘನ ವಾಹನಗಳಿಗೆ ಸಂಚಾರ ನಿರ್ಬಂಧವನ್ನು ಹೇರಲಾಗಿದ್ದು ಸಾರ್ವಜನಿಕರು ಸಹಕರಿಸುವಂತೆ ಸುಳ್ಯ ಪೊಲೀಸ್ ಠಾಣೆ ವತಿಯಿಂದ ಪ್ರಕಟಣೆ ನೀಡಲಾಗಿದೆ.




