February 3, 2026

ಪುತ್ತೂರು: ಅನ್ಯ ಕೋಮಿನ ಯುವತಿಗೆ ಚಾಕೊಲೇಟ್ ನೀಡಿದ ಪ್ರಕರಣ: ಇತ್ತಂಡಗಳ ನಡುವೆ ಮಾತಿನ ಚಕಮಕಿ

0
images-2.jpeg

ಪುತ್ತೂರು: ಹಿಂದೂ ಯುವತಿಯೋರ್ವಳಿಗೆ ಅನ್ಯಕೋಮಿನ ಯುವಕನೋರ್ವ ಚಾಕಲೇಟ್ ನೀಡಿದ ವಿಚಾರವಾಗಿ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದ ಘಟನೆ ಜು.15 ರಂದು ಕೆ.ಎಸ್. ಆರ್. ಟಿ. ಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಜು.14 ರಂದು ಅನ್ಯಕೋಮಿನ ಯುವಕನೋರ್ವ ಹಿಂದೂ ಯುವತಿಗೆ ಚಾಕಲೇಟ್ ನೀಡಿದ್ದು, ಈ ಬಗ್ಗೆ ನಿನ್ನೆಯೂ ಮಾತಿನ ಚಕಮಕಿ ನಡೆದಿದ್ದು, ಇಂದು ಮತ್ತೆ ಬಸ್ ನಿಲ್ದಾಣದಲ್ಲಿ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಠಾಣಾ ಪೊಲೀಸರು ಎರಡು ತಂಡದವರನ್ನು ಚದುರಿಸಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!