ದಲಿತರ ಕಾಲೋನಿಗೆ ಬಂದಂತ ಶೌಚಾಲಯ ಮತ್ತು ಸ್ನಾನ ಗೃಹ ಕಟ್ಟಡ ಸ್ಥಳ ಬದಲಾವಣೆಗೆ ಶಾಸಕ ಅಂಗಾರ ಕಾರಣ: ಅಂಬೇಡ್ಕರ್ ರಕ್ಷಣಾ ವೇದಿಕೆ ಆರೋಪ
ಸುಳ್ಯ: ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಕೊಡಿಯಾಲಬೈಲು ದಲಿತ ಕಾಲೋನಿಗೆ ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಶೌಚಾಲಯ ಮತ್ತು ಸ್ನಾನ ಘಟಕದ ಸಂಕೀರ್ಣ ಕಟ್ಟಡ ನಿರ್ಮಿಸಲು 30 ಲಕ್ಷ ಅನುದಾನ ಬಂದಿದ್ದು, ಬಂದಿರುವಂತ ಶೌಚಾಲಯ ಮತ್ತು ಸ್ನಾನ ಘಟಕದ ಸಂಕೀರ್ಣ ಕಟ್ಟಡವನ್ನು ಕಾಲೋನಿ ಬಿಟ್ಟು ಸುಮಾರು ದೂರವಿರುವಂತ ಹಿಂದೂ ರುದ್ರಭೂಮಿಯೊಳಗಡೆ ಕಟ್ಟಡ ನಿರ್ಮಾಣ ಮಾಡಿ ಗೇಟಿಗೆ ಬೀಗ ಹಾಕಿರುತ್ತಾರೆ.






ಈ ಘಟನೆಗೆ ಸುಳ್ಯ ಶಾಸಕ ಅಂಗಾರ ರವರು ಕಾರಣರಾಗಿದ್ದು, ಶೀಘ್ರದಲ್ಲಿ ಅದೇ 30 ಲಕ್ಷ ರೂಪಾಯಿ ಅನುದಾನದ ನೂತನ ಶೌಚಾಲಯ ಮತ್ತು ಸ್ನಾನ ಗೃಹ ಕಟ್ಟಡವನ್ನು ಕುಡಿಯಾಲ ಬೈಲು ದಲಿತ ಕಾಲೋನಿಯಲ್ಲಿ ನಿರ್ಮಿಸಿಕೊಡಬೇಕು, ಇಲ್ಲದಿದ್ದಲ್ಲಿ ಬಿಜೆಪಿ ಕಚೇರಿಯ ಮುಂಬಾಗ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಕಟಣೆಯಲ್ಲಿ ಉಲ್ಲೇಖಿಸಿರುವ ಅವರು ಶೌಚಾಲಯ ಮತ್ತು ಸ್ಥಾನ ಘಟಕದ ಸಂಕೀರ್ಣ ಕಟ್ಟಡವನ್ನು ಕೊಡಿಯಾಳಬೈಲು ದಲಿತ ಕಾಲೋನಿಯಲ್ಲಿ ನಿರ್ಮಿಸಬೇಕೆಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಕಳೆದ ಒಂದು ತಿಂಗಳ ಮೊದಲು ಸುಳ್ಯ ತಾಲೂಕು ಪಂಚಾಯತ್ ಮುಂಬಾಗದಲ್ಲಿ ಪ್ರತಿಭಟನೆ ಮಾಡಲಾಗಿತ್ತು.
ಈ ವೇಳೆ ಸುಳ್ಯ ತಾಲೂಕು ಪಂಚಾಯಿತ್ ಕಾರ್ಯನಿರ್ವಹಣಾಧಿಕಾರಿ ಅವರು ಬಂದು ಜಿಲ್ಲಾ ಪಂಚಾಯಿತಿಗೆ ರಿಪೋರ್ಟ್ ಮಾಡಿದ್ದೇನೆ ಅದು ಬಂದ ನಂತರ ನಿಮಗೆ ತಿಳಿಸುತ್ತೇನೆ ಅದರ ನಂತರ ವಿಚಾರಣೆ ಮಾಡೋಣ ಈಗ ಈ ಪ್ರತಿಭಟನೆ ಕೈಬಿಡಿ ಎಂದು ಹೇಳಿದಾಗ ಪ್ರತಿಭಟನೆಯನ್ನು ತಕ್ಕಮಟ್ಟಿಗೆ ಕೈ ಬಿಡಲಾಗಿತ್ತು.
ಈಗ ಜಿಲ್ಲಾ ಪಂಚಾಯತ್ ನಿಂದ ರಿಪೋರ್ಟ್ ಬಂದಿದೆ. ಆ ರಿಪೋರ್ಟಿನಲ್ಲಿ ದ.ಕ. ಜಿಲ್ಲಾ ಪಂಚಾಯತ್ ನ ಪತ್ರ ಸಂಖ್ಯೆ ದಕಜಿಪಂ/ಸ್ವಭಾವಿ/ಗ್ರಾ.ಗೌ.ಯೋ.12/2015=16 ದಿನಾಂಕ 13/5/2017 ರಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಇರುವ ಕಾರ್ಯನಿರ್ವಾಹಕ ಅಭಿಯಂತರರು ಕೆ.ಆರ್ .ಐ.ಡಿ.ಎಲ್. ಇವರಿಗೆ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯ ಕೊಡಿಯಾಲ ಬೈಲು ಪ.ಜಾತಿ ಜನವಸತಿ ಕಾಲೋನಿ ಬಳಿ ಸ್ಪಶಾನದ ಪಕ್ಕದಲ್ಲಿ ಸಮುದಾಯ ಶೌಚಾಲಯ ಹಾಗೂ ಸ್ನಾನ ಗೃಹ ನಿರ್ಮಿಸಲು ಮಾನ್ಯ ಶಾಸಕರು ಶಿಫಾರಸ್ಸು ಪತ್ರದಂತೆ ಆದೇಶಿಸಿದ್ದಾರೆ. ಅದರಂತೆ ಕೆ.ಆರ್.ಐ.ಡಿ.ಎಲ್. ಮಂಗಳೂರು ಇವರು ಸಮುದಾಯ ಸೌಚಾಲಯ ಹಾಗೂ ಸ್ನಾನ ಗೃಹ ಸಂಕೀರ್ಣವನ್ನು ಹಿಂದೂ ರುದ್ರ ಭೂಮಿಯ ಕಾಂಪೌಂಡಿನೊಳಗೆ ನಿರ್ಮಾಣ ಮಾಡಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದ ಬಗ್ಗೆ ದಾಖಲೆಯನ್ನು ಸಂಘಟನೆಗೆ ಕೊಟ್ಟಿದ್ದಾರೆ.
ಶಾಸಕರಾದ ಎಸ್ ಅಂಗಾರವರು ಈಗಿನ ಸಚಿವರು ಒಬ್ಬ ದಲಿತ ಶಾಸಕರಾಗಿ ದಲಿತರಿಗೆ ಈ ರೀತಿ ಅನ್ಯಾಯ ಮಾಡುವುದು ಸರಿಯಲ್ಲ ಸರ್ಕಾರದಿಂದ ಶೌಚಾಲಯ ಮತ್ತು ಸ್ನಾನ ಘಟಕ ಕಟ್ಟಡವನ್ನು ದಲಿತರಿಗೆ ದಿನನಿತ್ಯ ಕೆಲಸಕ್ಕೆ ಉಪಯೋಗಿಸಿಕೊಳ್ಳಲು ಕೊಟ್ಟಂತ ಸರಕಾರ ಇವತ್ತು ದಲಿತ ಜನಾಂಗದವರಿಗೆ ಉಪಯೋಗ ಆಗದ ಜಾಗದಲ್ಲಿ ನಿರ್ಮಾಣ ಮಾಡಿದ್ದಾರೆ. ಇವತ್ತು ಮೀಸಲಾತಿ ಕ್ಷೇತ್ರದಲ್ಲಿ 35 ವರ್ಷಗಳಿಂದ ಶಾಸಕರಾಗಿ ಈಗ ಸಚಿವರಾಗಿ ಒಂದು ಅಂಬೇಡ್ಕರ್ ಭವನವನ್ನು ಇದುವರೆಗೂ ಸಂಪೂರ್ಣ ಮಾಡಲು ಇವರಿಂದ ಸಾಧ್ಯವಾಗಲಿಲ್ಲ.
ಸುಳ್ಯ ಕಸಬ ಗ್ರಾಮದಲ್ಲಿ ಹಲವು ದಲಿತರಿಗೆ ಮನೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ದಲಿತರಿಗೆ ನಿಗಮದಿಂದ ಬೋರ್ ವೆಲ್ ಯೋಜನೆ ಬಂದರೆ ಶಾಸಕರ ಸಹಿ ಬೇಕು ಎಂದರೆ ಕಾಂಗ್ರೆಸ್ ಪಕ್ಷದವರಾದರೆ ಸಹಿ ಹಾಕುವುದಿಲ್ಲ ಎಂದು ಬಿಜೆಪಿ ಕಚೇರಿಯಲ್ಲಿ ಹೇಳುತ್ತಾರೆ. ಹಾಗಾದರೆ ದಲಿತ ಸಮುದಾಯದವರು ಎಲ್ಲಿ ಹೋಗಬೇಕು.
ಸಾರ್ವಜನಿಕರ ತೆರಿಗೆಯ ದುಡ್ಡಿನಿಂದ ಸರ್ಕಾರ ನಡೆಯುತ್ತದೆ.
ಯಾರು ಕೂಡ ಅವರ ಜೋಬಿನಿಂದ ಕೊಡುವಂತ ಹಣವಲ್ಲ.
ಆದಕಾರಣ ನಮಗೆ 30 ಲಕ್ಷ ಅನುದಾನದ ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಬಂದಿರುವಂತ ಶೌಚಾಲಯ ಮತ್ತು ಸ್ನಾನ ಘಟಕದ ಸಂಕೀರ್ಣ ಕಟ್ಟಡವನ್ನು ಕೊಡಿಯಾಲಬೈಲ್ ದಲಿತ ಕಾಲೋನಿಯಲ್ಲಿ ನಿರ್ಮಿಸಿ ಕೊಡಬೇಕೆಂದು ಮಾನ್ಯ ಸಚಿವರಾದ ಎಸ್ ಅಂಗಾರ ಅವರಿಗೆ ಈ ಮಾಧ್ಯಮದ ಮೂಲಕ ಕೇಳಿಕೊಳ್ಳುತ್ತಿದ್ದೇನೆ. ಒಂದು ವೇಳೆ ನಮ್ಮ ಈ ಬೇಡಿಕೆ ಈಡೇರದಿದ್ದಲ್ಲಿ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಈ ಮೂಲಕ ಎಚ್ಚರಿಕೆಯನ್ನು ಕೊಡುತ್ತಿದ್ದೇವೆ ಎಂದು ಉಲ್ಲೇಖಿಸಿದ್ದಾರೆ.




