ಗ್ರಾಮ ಪಂಚಾಯತ್ ಸದಸ್ಯನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ
ಹುಬ್ಬಳ್ಳಿ: ಕೌಟುಂಬಿಕ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ರಾಯನಾಳ ಗ್ರಾಮ ಪಂಚಾಯತ್ ಸದಸ್ಯನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಸೋಮವಾರ ರಾತ್ರಿ ರಾಯನಾಳ ಬಳಿ ನಡೆದಿದೆ.
ರಾಯನಾಳ ಗ್ರಾ.ಪಂ ಸದಸ್ಯ ಗಂಗಿವಾಳ ಗ್ರಾಮದ ದೀಪಕ ಪಠದಾರಿ ಹತ್ಯೆಯಾಗಿದ್ದು, ಮೇಟಿ ಕುಟುಂಬಸ್ಥರೇ ಹಳೆ ದ್ವೇಷ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ದೀಪಕನು ರಾಯನಾಳ ಗ್ರಾಮದ ಮೇಟಿ ಕುಟುಂಬದ ಮಹಿಳೆಯನ್ನು ಕುಟುಂಬದವರ ಕಟು ವಿರೋಧಗಳ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದ. ಇದೇ ದ್ವೇಷದಿಂ ಈ ಕುಟುಂಬದವರು ಸೋಮವಾರ ರಾತ್ರಿ ಬೈಕ್ ನಲ್ಲಿ ದೀಪಕ್ ಹೋಗುತ್ತಿದ್ದ ವೇಳೆ ರಾಯನಾಳ ಬಳಿ 8-10 ಜನರ ಗುಂಪು ಮಾರಕಾಸ್ತ್ರಗಳಿಂದ ಮನ ಬಂದಂತೆ ದಾಳಿ ಮಾಡಿ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.




