March 26, 2026

ಪೆರ್ಲ-ವಿಟ್ಲ ರಸ್ತೆಯ ಸಾರಡ್ಕದಲ್ಲಿ ಗುಡ್ಡ ಕುಸಿತ: ಬೈಕ್ ಸವಾರ ಅಪಾಯದಿಂದ ಪಾರು

0
image_editor_output_image1214443476-1656998920716.jpg

ವಿಟ್ಲ: ಭಾರೀ ಮಳೆಗೆ ರಸ್ತೆಗೆ ಗುಡ್ಡ ಕುಸಿದು ಬೈಕ್ ಸವಾರ ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ಮಂಗಳವಾರ ಪೆರ್ಲ-ವಿಟ್ಲ ರಸ್ತೆಯ ಸಾರಡ್ಕ ಎಂಬಲ್ಲಿ ನಡೆದಿದೆ.

ಕಾಸರಗೋಡು-ವಿಟ್ಲ ಹೆದ್ದಾರಿಯ ಸಾರಡ್ಕ ಎಂಬಲ್ಲಿ ಈ ಸಂಭವಿಸಿದ್ದು, ಇದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ.

ರಸ್ತೆಗೆ ಗುಡ್ಡ ಕುಸಿದ ಪರಿಣಾಮ ದ್ವಿಚಕ್ರ ವಾಹನ ಜಖಂಗೊಂಡಿದ್ದು, ರಸ್ತೆಯನ್ನು ಬಂದ್ ಮಾಡಿ ತೆರವು ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಗುಡ್ಡ ರಸ್ತೆಗೆ ಬಿದ್ದ ಕಾರಣ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!