ಟ್ರ್ಯಾಕ್ಟರ್ ಗೆ ಸಿಲುಕಿ ತಾಯಿ-ಮಗು ಮೃತ್ಯು
ರಾಯಚೂರು: ಮನ್ಸಲಾಪುರ ರಸ್ತೆಯಲ್ಲಿನ ಶ್ರೀ ಲಕ್ಷ್ಮಿ ವೆಂಕಟೇಶ್ವರ ಜಿನ್ನಿಂಗ್ ಫ್ಯಾಕ್ಟರಿ ಬಳಿ ಟ್ರ್ಯಾಕ್ಟರ್ ಗೆ ಸಿಲುಕಿ ತಾಯಿ-ಮಗು ಮೃತಪಟ್ಟ ಧಾರುಣ ಘಟನೆ ನಡೆದಿದೆ.
ಮಹಾರಾಷ್ಟ್ರ ಮೂಲದ ಕಾರ್ಮಿಕ ಮಹಿಳೆ ವೈಶಾಲಿ (26 ವ), ಸಮರ್ಥ (3 ವ) ಮೃತರು. ಹತ್ತಿ ತುಂಬಿದ್ದ ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಿಸುವಾಗ ದುರ್ಘಟನೆ ಸಂಭವಿಸಿದೆ.
ಮಗು ಟ್ರ್ಯಾಕ್ಟರ್ ಗಾಲಿಗೆ ಸಿಲುಕುವ ಭಯದಿಂದ ರಕ್ಷಿಸಲು ಮುನ್ನುಗ್ಗಿದ್ದು, ತಾಯಿ ಕೂಡ ಮಗು ಸಮೇತ ಟ್ರ್ಯಾಕ್ಟರ್ಗೆ ಸಿಲುಕಿದ್ದಾರೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹಗಳನ್ನ ರಿಮ್ಸ್ ಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.





