March 17, 2026

ಮಂಗಳೂರು: ವಿನಾಯಕ ಕಾಮತ್ ಕೊಲೆ ಪ್ರಕರಣ:
ಇಬ್ಬರು ಆರೋಪಿಗಳ‌ ಬಂಧನ

0
image_editor_output_image1520743499-1636017798608.jpg

ಮಂಗಳೂರು: ನಗರದ ಕಾರ್ ಸ್ಟ್ರೀಟ್ ನ ಅಪಾರ್ಟ್ ಮೆಂಟ್ ಒಂದರಲ್ಲಿ ಬುಧವಾರ ತಡ ರಾತ್ರಿ ನಡೆದ ವಿನಾಯಕ ಕಾಮತ್ ಕೊಲೆ ಪ್ರಕರಣದ ಆರೋಪಿಗಳಾದ ಕೃಷ್ಣಾನಂದ ಕಿಣಿ ಮತ್ತು ಆವಿನಾಶ್ ಕಿಣಿ ಅವರನ್ನು ಮಂಗಳೂರು ಉತ್ತರ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಪೂರ್ವ ದ್ವೇಷದ ಹಿನ್ನಲೆಯಿಂದ ವಿನಾಯಕ ಕಾಮತ್ ಅವರ ಎದೆಗೆ ಅಪಾರ್ಟ್ ಮೆಂಟ್ ನ ಪಾರ್ಕಿಂಗ್ ಸ್ಥಳದಲ್ಲಿ ಇರಿಯಲಾಗಿತ್ತು, ಈ ಕುರಿತು ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು.

ಗಂಭೀರವಾಗಿ ಗಾಯಗೊಂದು ಕುಸಿದು ಬಿದ್ದಿದ್ದ ವಿನಾಯಕ ಕಾಮತ್ ಅವರನ್ನು ಅಪಾರ್ಟ್ ಮೆಂಟ್ ನಿವಾಸಿಗಳು ಯೆನಪೋಯ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!