ಪರ್ತಿಪ್ಪಾಡಿ ಮದ್ರಸ ಎಸ್.ಕೆ.ಎಸ್.ಬಿ.ವಿ. ವತಿಯಿಂದ ಮೀಲಾದ್ ಸಂಗಮ
ವಿಟ್ಲ: ಪರ್ತಿಪ್ಪಾಡಿ ನೂರುಲ್ ಉಲೂಂ ಮದ್ರಸದ ವಿದ್ಯಾರ್ಥಿಗಳ ಸಂಘಟನೆಯಾದ ಎಸ್.ಕೆ.ಎಸ್.ಬಿ.ವಿ. ವತಿಯಿಂದ ಮೀಲಾದ್ ಸಂಗಮವು ಮದ್ರಸ ಸಭಾಂಗಣದಲ್ಲಿ ನಡೆಯಿತು.
ಸ್ಥಳೀಯ ಜಮಾಅತ್ ಅಧ್ಯಕ್ಷ ಪಿ.ಎಂ.ಅಬ್ದುಲ್ ಹಕೀಂ ಪರ್ತಿಪ್ಪಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುದರ್ರಿಸ್ ಜಿ.ಎಂ. ಅಬ್ದುಲ್ ರಹಿಮಾನ್ ಫೈಝಿ ಮೌಲಿದ್ ಮಜ್ಲಿಸ್ ಗೆ ನೇತೃತ್ವ ನೀಡಿ ಮೀಲಾದ್ ಸಂದೇಶ ನೀಡಿದರು.
ಜಮಾಅತ್ ಪ್ರದಾನ ಕಾರ್ಯದರ್ಶಿ ಅಬೂಬಕ್ಕರ್ ಹಾಜಿ , ಕಾರ್ಯದರ್ಶಿ ಕಲಂದರ್ ಪರ್ತಿಪ್ಪಾಡಿ, ಕೋಶಾದಿಕಾರಿ ಅಹ್ಮದ್ ಕುಂಞ , ಸದರ್ ಉಸ್ತಾದ್ ಅಬ್ಬಾಸ್ ದಾರಿಮಿ, ಎ.ಕೆ.ಉಸ್ತಾದ್ ಹಾಗೂ ಸ್ಥಳೀಯ ದರ್ಸ್ ಮತ್ತು ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿದರು, ಎಸ್.ಕೆ.ಎಸ್.ಬಿ.ವಿ.ಪದಾಧಿಕಾರಿಗಳಾದ ಅನೀಸ್,ಔಫ್, ಅಬ್ದುಲ್ ರಾಝಿಕ್ ಮೊದಲಾದವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.





