March 26, 2026

ಪುತ್ತೂರು: ಹಿಂದು ದೇವರುಗಳ ಬಗ್ಗೆ ಅವಹೇಳನ: “ದೇಶದ್ರೋಹಿ ಶೈಲಾಜರಿಗೆ ಶ್ರದ್ಧಾಂಜಲಿ” ನಾಮಫಲಕ ಅಳವಡಿಕೆ

0
image_editor_output_image260218593-1655610381851

ಪುತ್ತೂರು: ಮಹಿಳಾ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾಯದರ್ಶಿ ಯಾಗಿರುವ ಪುತ್ತೂರಿನ ನ್ಯಾಯವಾದಿ ಶೈಲಜಾ ಅಮರನಾಥ್ ಮತ್ತು ಕೆಲವರು ಕ್ಲಬ್ ಹೌಸ್ ನಲ್ಲಿ ಹಿಂದು ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಹಿಂದು ದೇವರುಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಹಲವು ಹಿಂದು ಪರ ಸಂಘಟನೆಗಳು ದೂರು ನೀಡಿತ್ತು. ಈ ಬೆನ್ನಲ್ಲೇ ಬಪ್ಪಳಿಗೆಯಲ್ಲಿರುವ ಅವರ ನಿವಾಸಕ್ಕೆ ಯುವಕರ ತಂಡವೊಂದು ಕಲ್ಲೆಸೆದು ಹಾಗೂ ಮಸಿ ಎಸೆದು ಹಾನಿ ಮಾಡಿತ್ತು ಅದರ ಬೆನ್ನಲ್ಲೇ ಈಗ ಪುತ್ತೂರು ಮಿನಿ ವಿಧಾನ ಸೌಧದ ಬಳಿ ಇರುವ ಅವರ ಕಚೇರಿಗೆ “ದೇಶದ್ರೋಹಿ ಶೈಲಾಜರಿಗೆ ಶ್ರದ್ಧಾಂಜಲಿ ಮತ್ತೆ ಹಿಂದೂಸ್ಥಾನದಲ್ಲಿ ಹುಟ್ಟಿ ಬರಬೇಡಿ” ಎಂದು ಸ್ಟಿಕ್ಕರ್ ಅಳವಡಿಸಿದ್ದಾರೆ.

ಶೈಲಜಾ ಅವರ ನಿವಾಸಕ್ಕೆ ತಂಡವೊಂದು ದಾಳಿ ನಡೆಸಿ ಮನೆಯ ಕಿಟಕಿ ಗಾಜುಗಳನ್ನು ಮುರಿದಿರುವ ಹಾಗೂ ಮನೆಗೆ ಮಡ್ ಆಯಿಲ್ ಬಳಿದಿರುವ ಘಟನೆ ಇಂದು ( ಜೂ ೧೮) ಸಂಜೆ ನಡೆದಿದೆ.
ಪುತ್ತೂರಿನ ಬಪ್ಪಳಿಗೆಯಲ್ಲಿರುವ ಮನೆಯಂಗಳಕ್ಕೆ ಬಂದ ಕೆಲ ಯುವಕರಿದ್ದ ತಂಡವೊಂದು ಮನೆಯ ಕಿಟಕಿಗೆ ಅಳವಡಿಸಿದ ಗಾಜುಗಳನ್ನು ಒಡೆದು, ಮನೆಯ ಸಿಟೌಟ್ ಗೆ ಮಡ್ ಆಯಿಲ್ ಸುರಿದು ತೆರಳಿದ್ದು ಈ ಬಗ್ಗೆ ಶೈಲಾಜರವರು ಪುತ್ತೂರು ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!