2021-22 ದ್ವಿತೀಯ ಪಿ.ಯು.ಸಿ. ಫಲಿತಾಂಶ: ಉತ್ತಮ ಸಾಧನೆಗೈದ ಮೆಲ್ಕಾರ್ ಮಹಿಳಾ ಪಿ.ಯು.ಕಾಲೇಜು ವಿದ್ಯಾರ್ಥಿನಿಯರು
ಮಂಗಳೂರು, ಜೂ.18: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೆಲ್ಕಾರ್ ಮಹಿಳಾ ಪಿಯು ಕಾಲೇಜು 95% ಫಲಿತಾಂಶ ಪಡೆದು ಉತ್ತಮ ಸಾಧನೆಗೈದಿದೆ.
ಒಟ್ಟು 122 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, 115. ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.
ಅದರಲ್ಲಿ, ವಾಣಿಜ್ಯ ವಿಭಾಗದಲ್ಲಿ ಅಸ್ಬಹುನ್ನಿಶಾ 575 (95.83%), ಕಲಾ ವಿಭಾಗದಲ್ಲಿ ನಿಶಾತ್ ಫಾತಿಮಾ 566(94.33%) ಹಾಗೂ ವಿಜ್ಞಾನ ವಿಭಾಗದಲ್ಲಿ ನಫೀಸಾ ಶಹಾಬ 558 (93%) ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.





