September 20, 2024

ಕಲುಷಿತ ನೀರು ಕುಡಿದು ಮತ್ತೋರ್ವ ವ್ಯಕ್ತಿ ಸಾವು:
ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆ

0

ರಾಯಚೂರು: ಕಲುಷಿತ ನೀರು ಸೇವನೆಯಿಂದ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದ್ದು, ಇದರೊಂದಿಗೆ ಪ್ರಕರಣ ಸಂಬಂಧ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ವಾರ್ಡ್ 13ರ ಯರಗೇರಾ ಬಡಾವಣೆ ನಿವಾಸಿ, ಉಪನ್ಯಾಸಕ ಜನಕರಾಜ್ (48) ಮೃತ ವ್ಯಕ್ತಿಯಾಗಿದ್ದಾರೆ. ಜಿಲ್ಲಾಸ್ಪತ್ರೆಯಿಂದ ಮೂರು ದಿನಗಳ ಹಿಂದೆ ಡಿಸ್ಚಾರ್ಜ್ ಆಗಿದ್ದ ಜನಕರಾಜ್ ನಂತರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ವಾಂತಿ ಮತ್ತು ಭೇದಿ ಸಮಸ್ಯೆಗಳಿಂದ ಕೆಲ ದಿನಗಳ ಹಿಂದೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ 70 ಜನರ ಪೈಕಿ ಜನಕರಾಜ್ ಕೂಡ ಒಬ್ಬರಾಗಿದ್ದರೆಂದು ಮೂಲಗಳಿಂದ ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!