October 10, 2026

ಮಂಗಳೂರು: ಆಸ್ತಿಗಾಗಿ ತಂದೆಯನ್ನೇ ಕೊಲೆ ಮಾಡಿದ ಆರೋಪ: 2 ತಿಂಗಳ ಬಳಿಕ ದಫನ ಭೂಮಿಯಿಂದ ಶವ ಹೊರತೆಗೆದು ತನಿಖೆ

0
image_editor_output_image-560402756-1791604812875

ಮಂಗಳೂರು: ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಾಗಿ ಸ್ವಂತ ತಂದೆಯನ್ನೇ ಮಗಳು ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಇದೀಗ ಪ್ರಕರಣ ದಾಖಲಾದ ಬೆನ್ನಲ್ಲೆ ದಫನ ಮಾಡಿದ್ದ ಶವವನ್ನು ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮಂಗಳೂರಿನ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿ ಆಲ್ಬರ್ಟ್ ರೇಗೋ (ನಿಗೂಢವಾಗಿ ಮೃತಪಟ್ಟ ವ್ಯಕ್ತಿ).ಕಾಲೇಜು ವಿದ್ಯಾರ್ಥಿ ಬೈಕ್

ಕಳೆದ ಜುಲೈ 19 ರಂದು ಆಲ್ಬರ್ಟ್ ರೇಗೋ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಆದರೆ, ಅವರೊಂದಿಗೆ ವಾಸವಿದ್ದ ಮಗಳು ಮಾಯಾ ರೇಗೋ, ತಂದೆ ಮೃತಪಟ್ಟರೂ ಅಕ್ಕಪಕ್ಕದ ನಿವಾಸಿಗಳಿಗಾಗಲಿ ಅಥವಾ ವಿದೇಶದಲ್ಲಿರುವ ಕುಟುಂಬಸ್ಥರಿಗಾಗಲಿ ಯಾವುದೇ ಮಾಹಿತಿ ನೀಡದೆ, ಮಂಗಳೂರಿನ ದೇರೆಬೈಲ್ ಚರ್ಚ್‌ನ ದಫನ ಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದರು. ತಂದೆಯೊಂದಿಗೆಯೇ ಇದ್ದ ಮಾಯಾಳ ಈ ಸಂಶಯಾಸ್ಪದ ಹಾಗೂ ಅತ್ಯಂತ ರಹಸ್ಯ ನಡವಳಿಕೆಯು ಆಲ್ಬರ್ಟ್ ಅವರ ಆಪ್ತ ಸ್ನೇಹಿತರಲ್ಲಿ ತೀವ್ರ ಅನುಮಾನ ಹುಟ್ಟುಹಾಕಿತ್ತು.

 

ಮೃತ ಆಲ್ಬರ್ಟ್ ರೇಗೋ ಅವರಿಗೆ ಒಟ್ಟು ನಾಲ್ವರು ಮಕ್ಕಳಿದ್ದು, ಇಬ್ಬರು ದುಬೈನಲ್ಲಿ ನೆಲೆಸಿದ್ದಾರೆ. ಆಲ್ಬರ್ಟ್ ತಮ್ಮ ಜೀವಮಾನದಲ್ಲಿ ಕೋಟಿ ಮೌಲ್ಯದ ಸ್ಥಿರಾಸ್ತಿ ಮಾಡಿದ್ದರು. ಆದರೆ, ಮಗಳು ಮಾಯಾ ರೇಗೋ ತನ್ನ ಬಾಯ್‌ಫ್ರೆಂಡ್ ಜೊತೆ ಸೇರಿಕೊಂಡು, ತಂದೆಯ ಸಾವಿಗೂ ಮುನ್ನ ಒತ್ತಾಯಪೂರ್ವಕವಾಗಿ ಆಸ್ತಿಯ ವಿಲ್ ಅನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಳು ಎನ್ನಲಾಗಿದೆ. ತದನಂತರ ಆಸ್ತಿ ಸಂಪೂರ್ಣ ಕೈಸೇರುತ್ತಿದ್ದಂತೆ ತಂದೆಯನ್ನು ಕೊಲೆ ಮಾಡಿ, ಸಹಜ ಸಾವು ಎಂದು ಬಿಂಬಿಸಲು ಸಂಚು ರೂಪಿಸಿದ್ದಳು ಎಂಬ ಗಂಭೀರ ಆರೋಪ ಕೇಳಿಬಂದಿದೆ.

Leave a Reply

Your email address will not be published. Required fields are marked *

error: Content is protected !!