March 26, 2026

ನಿಯಂತ್ರಣ ತಪ್ಪಿದ ಹೊಂಡಕ್ಕೆ ಉರುಳಿಬಿದ್ದ ಕಾರು:
8 ಮಂದಿ ಸ್ಥಳದಲ್ಲಿಯೇ ಮೃತ್ಯು

0
image_editor_output_image-1418848432-1654927053699.jpg

ಬಿಹಾರ: ನಿಯಂತ್ರಣ ತಪ್ಪಿದ ಕಾರು ಹೊಂಡಕ್ಕೆ ಉರುಳಿಬಿದ್ದ ಪರಿಣಾಮ 8 ಮಂದಿ ಸ್ಥಳದಲ್ಲಿಯೇ ದುರ್ಮರಣವನ್ನಪ್ಪಿರುವ ಘಟನೆ ಬಿಹಾರದ ರೌತಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ಕಾರಿನಲ್ಲಿ ಒಟ್ಟು ಹತ್ತು ಜನರಿದ್ದರು. ಅಪಘಾತ ಸಂಭವಿಸಿದ ವೇಳೆ ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, 8 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತರು ಕಿಶನ್‌ಗಂಜ್‌ನ ನುನಿಯಾ ಗ್ರಾಮದ ನಿವಾಸಿಗಳು ಎಂದು ಹೇಳಲಾಗುತ್ತಿದೆ.

ಸಂಬಂಧಿಕರೊಬ್ಬರ ವಿವಾಹ ಕಾರ್ಯಕ್ರಮವನ್ನ ಮುಗಿಸಿ ಕಿಶನ್‌ಗಂಜ್​ಗೆ ಹಿಂದಿರುವಾಗ ಪೂರ್ನಿಯಾದ ಉಂಗಾರ್ ಒಪಿಯ ಕಾಂಜಿಯಾ ಮಿಡಲ್ ಸ್ಕೂಲ್ ಬಳಿ ಘಟನೆ ಸಂಭವಿಸಿದೆ.

ಗಾಯಾಳುಗಳ ಚೀರಾಟ ಕೇಳಿ ಸ್ಥಳಕ್ಕಾಮಿಸಿದ ಅಕ್ಕಪಕ್ಕದವರು ಕಾರಿನಲ್ಲಿದ್ದ ಮೃತ ದೇಹಗಳನ್ನ ಹೊರತೆಗೆದಿದ್ದಾರೆ. ಚಾಲಕನ ಅತಿಯಾದ ವೇಗ ಮತ್ತು ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!