July 6, 2026

ವಿಟ್ಲ: ಕಾರ್ಮಿಕರನ್ನು ಕೋರೆಯಲ್ಲಿ ಬೇಕಾಬಿಟ್ಟಿ ದುಡಿಸಿ ಸಂಬಳ ನೀಡದೇ ವಂಚನೆ: ಕಾರ್ಮಿಕ ಇಲಾಖೆಗೆ ದೂರು ನೀಡಿದ ಕಾರ್ಮಿಕರು

0
image_editor_output_image71355808-1654691190177.jpg

ಬಂಟ್ವಾಳ: ಕಲ್ಲು ಕೋರೆಯ ಮಾಲಕರು ಕೆಲಸ ಮಾಡಿಸಿ, ಕೆಲಸ ಮುಗಿದ ಸಂಬಳ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಕೆಲಸಗಾರರು ಸಹಾಯಕ ಕಾರ್ಮಿಕ ಆಯುಕ್ತರಿಗೆ ದೂರು ನೀಡಿದ್ದಾರೆ.

ಗಣೇಶ್, ರಮೇಶ್, ರಜನೇಶ್, ಸಾಹೇಬ್ ಯಾದವ್, ಲಾಲ್ ಬಾಬು ಯಾದವ್, ಸಾಗರ್, ರಾಕೇಶ್ ಯಾದವ್ ಹಾಗೂ ಮತ್ತಿತರ ಕೆಲಸಗಾರರು ವೀರಕಂಭ ಶ್ರೀ ಪೊಳಲಿ ಶಿಲೆಕಲ್ಲು ಕಲ್ಲು ಕೋರೆಯ ಮಾಲಕರಾದ ಪ್ರೇಮ್ ಗೌಡ ಮತ್ತು ಮ್ಯಾನೇಜರ್ ದೀಕ್ಷಿತ್ ರವರ ವಿರುದ್ಧ ದೂರು ನೀಡಿದ್ದಾರೆ.

ಶ್ರೀ ಪೊಳಲಿ ಶಿಲೆಕಲ್ಲು ಸಂಸ್ಥೆಯಲ್ಲಿ ಕಳೆದ 10 ತಿಂಗಳಿಂದ ಕೆಲಸ ಮಾಡಿದ್ದು, ಆದರೆ ಕೆಲಸ ಮುಗಿದ ಬಳಿಕ ನಮಗೆ ಸಂಬಳ ಕೊಡದೆ ವಂಚನೆ ಮಾಡಿದ್ದಾರೆ.

ನಾವು ಬೇರೆ ರಾಜ್ಯದ ನಿವಾಸಿಗಳಾದ ಕಾರಣ ಈಗ ನಮಗೆ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಂಡತಿ ಮತ್ತು ಸಣ್ಣ ಮಕ್ಕಳು ಆಹಾರವಿಲ್ಲದೆ ತುಂಬಾ ತೊಂದರೆಯಲ್ಲಿದ್ದೇವೆ. ಆದ್ದರಿಂದ ಮಾಲಕರನ್ನು ಕರೆಸಿ ನಮ್ಮ ಬಾಕಿ ಸಂಬಳವನ್ನು ಕೊಡಲೇ ತೆಗೆಸಿ ಕೊಡಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!