February 2, 2026

ಕಂದಕಕ್ಕೆ ಉರುಳಿದ ಪ್ರಯಾಣಿಕರ ವಾಹನ: ಐವರು ಮಕ್ಕಳು ಸೇರಿದಂತೆ 22 ಮಂದಿ ಮೃತ್ಯು

0
image_editor_output_image559505502-1654688226980.jpg

ಕರಾಚಿ: ಪ್ರಯಾಣಿಕರ ವಾಹನವೊಂದು ನೂರಾರು ಅಡಿ ಆಳದ ಕಂದಕಕ್ಕೆ ಉರುಳಿದ ಪರಿಣಾಮ ಐವರು ಮಕ್ಕಳು ಸೇರಿದಂತೆ 22 ಮಂದಿ ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಪರ್ವತಮಯ ಬಲೂಚಿಸ್ತಾನ ಪ್ರಾಂತ್ಯದಲ್ಲಿ ನಡೆದಿದೆ.

ಕಿಲ್ಲಾ ಸೈಫುಲ್ಲಾ ಪ್ರದೇಶದ ಅಖ್ತರಾಜೈನ ಪರ್ವತದ ಸೂಕ್ಷ್ಮ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ವಾಹನವು ಕಂದಕಕ್ಕೆ ಉರುಳಿದೆ.

ವಾಹನದಲ್ಲಿ 23 ಮಂದಿ ಝೋಬ್ ಪಟ್ಟಣದಿಂದ ಲೊರಾಲಿಯಾಗೆ ಪ್ರಯಾಣಿಸುತ್ತಿದ್ದರು ಎಂದು ಝೋಬ್ ಜಿಲ್ಲೆಯ ಡಿಸಿ ಮಹಮ್ಮದ್ ಖಾಸಿಂ ತಿಳಿಸಿದ್ದಾರೆ.

‘ವಾಹನವು ಅಖ್ತರಾಜೈನ ಪರ್ವತದ ತುದಿಯಿಂದ ಕೆಳಗೆ ಬಿದ್ದಿದೆ. ಆಳವಾದ ಪರ್ವತದ ಕಂದಕದಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹರಸಾಹಸಪಟ್ಟು ಹೊರಗೆ ತೆಗೆಯಲಾಗಿದೆ’ಎಂದೂ ಅವರು ಹೇಳಿದ್ದಾರೆ.

ಮೃತರಲ್ಲಿ 5 ಮಕ್ಕಳು, ಐವರು ಮಹಿಳೆಯರು ಮತ್ತು 12 ಮಂದಿ ಪುರುಷರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡಿರುವ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!