ಇಸ್ಲಾಂ ಧರ್ಮದ ಅವಹೇಳನ: ರಾಧಾಕೃಷ್ಣ ಅಡ್ಯಂತಾಯ ವಿರುದ್ಧ ಎಸ್ ಡಿ ಪಿ ಐ ವಿಟ್ಲ ಠಾಣೆಗೆ ದೂರು
ವಿಟ್ಲ: ಕಳೆದ ಜೂನ್ 6 ನೇ ತಾರೀಖಿಗೆ ವಿಟ್ಲದಲ್ಲಿ ನಡೆದ ಹಿಂದೂ ಜಾಗೃತಿ ಸಭೆಯಲ್ಲಿ ಇಸ್ಲಾಂ ಧರ್ಮವನ್ನು ರಾಧಾಕೃಷ್ಣ ಅಡ್ಯಂತಾಯ ಅವರು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಎಸ್ ಡಿ ಪಿ ಐ ಒಕ್ಕೆತ್ತೂರು ಅಧ್ಯಕ್ಷರಾದ ಇಸ್ಮಾಯಿಲ್ N3 ರವರು ದೂರು ದಾಖಲಿಸಿದರು.
ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ವಿಟ್ಲ ಬ್ಲಾಕ್ ಅಧ್ಯಕ್ಷರಾದ ಬದ್ರುದ್ದೀನ್ ಪುಣಚ, ಕ್ಷೇತ್ರ ಸಮಿತಿ ಕಾರ್ಯದರ್ಶಿ ಅನ್ವರ್ ಪೆರುವಾಯಿ,ಮುಖಂಡರಾದ ಅಝೀಝ್ ಕಡಂಬು ರವರು ಉಪಸ್ಥಿತರಿದ್ದರು.




