ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಇಳಿಕೆ:
ನಾಳೆಯಿಂದ ಹೊಸ ದರ ಜಾರಿ
ನವದೆಹಲಿ: ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಕೇಂದ್ರ ಸರಕಾರವೂ ದೇಶದ ಜನತೆಗೆ ಭರ್ಜರಿ ಕೊಡುಗೆ ನೀಡಿದೆ. ತೈಲಗಳ ಮೇಲೆ ಕೇಂದ್ರ ಸರಕಾರವೂ ವಿಧಿಸುವ ಅಬಕಾರಿ ಸುಂಕ (Excise duty ) ವನ್ನು ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸುವುದಾಗಿ ಅದು ತಿಳಿಸಿದೆ.
ಪೆಟ್ರೋಲ್ ಮೇಲಿನ ಅಬಕಾರಿ ಶುಂಕವನ್ನು 5 ರೂಪಾಯಿ ಹಾಗೂ ಡಿಸೀಲ್ ಮೇಲಿನ ಸುಂಕವನ್ನು ರೂ. 10 ಕೇಂದ್ರ ಸರಕಾರ ಇಳಿಸಿರುವುದಾಗಿ ndtv ವರದಿ ಮಾಡಿದೆ. ಹೀಗಾಗಿ ನಾಳೆಯಿಂದ ಪ್ರತಿ ಲೀಟರ್ ಪೆಟ್ರೋಲ್ ನ ದರ 5 ಹಾಗೂ ಡೀಸೆಲ್ ನ ದರ 10 ರಷ್ಟು ಇಳಿಕೆಯಾಗಲಿದೆ.





