August 12, 2026

ಖ್ಯಾತ ತಮಿಳು ನಟ ವಿಜಯ್ ಸೇತುಪತಿ ಮೇಲೆ ಹಲ್ಲೆ ಗೆ ಯತ್ನ

0
vijay_sethupathi_2.jpg

ಬೆಂಗಳೂರು: ತಮಿಳು ನಟ ವಿಜಯ್ ಸೇತುಪತಿ ಮೇಲೆ ಪ್ರಯಾಣಿಕನೊಬ್ಬ ಹಲ್ಲೆಗೆ ಯತ್ನಿಸಿರೋ ಘಟನೆ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ರಾತ್ರಿ ನಡೆದಿದೆ.

ಕಳೆದ ನಿನ್ನೆ ರಾತ್ರಿ ತಮಿಳು ನಟ ವಿಜಯ್ ಸೇತುಪತಿಯವರು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಇದಕ್ಕೂ ಮುನ್ನ ವಿಮಾನದಲ್ಲಿ ನಟ ವಿಜಯ್ ಸೇತುಪತಿಯವರ ಪಿಎ ಜೊತೆಗೆ ಸಹ ಪ್ರಯಾಣಿಕನೊಬ್ಬ ಜಗಳ ಮಾಡಿದ್ದನು.

ಇದೇ ವಿಚಾರವಾಗಿ ಆನಂತರ ತಣ್ಣಗಾಗಿತ್ತು. ಹೀಗೆ ಕಿರಿಕ್ ಮಾಡಿದ್ದಂತ ಸಹ ಪ್ರಯಾಣಿಕ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟ ವಿಜಯ್ ಸೇತುಪತಿ ಮೇಲೆ ಹಲ್ಲೆಗೆ ಯತ್ನಿಸಿದ್ದಾಗೆ ತಿಳಿದು ಬಂದಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Leave a Reply

Your email address will not be published. Required fields are marked *

You may have missed

error: Content is protected !!