ಅಕ್ರಮ ಹಣ ವರ್ಗಾವಣೆ ಪ್ರಕರಣ:
ಡಿಎಂಕೆ ಮಾಜಿ ಸಚಿವರ ಪುತ್ರನ ಆಪ್ತನಿಗೆ 7 ವರ್ಷ ಜೈಲು ಶಿಕ್ಷೆ
ಚೆನ್ನೈ: ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮದುದಾರ ಮತ್ತು ಡಿಎಂಕೆ ಸಚಿವ ಕೆಸಿ ಮಣಿ ಅವರ ಪುತ್ರ ಮಣಿ ಅನ್ಬಳಗನ್ ಅವರ ಆಪ್ತ ಸಹಾಯಕ ಕೆ ಲಿಯಾಕತ್ ಅಲಿ ಅವರನ್ನು ಚೆನ್ನೈ ನ್ಯಾಯಾಲಯ ಬುಧವಾರ ದೋಷಿ ಎಂದು ಘೋಷಿಸಿದೆ ಮತ್ತು ಏಳು ವರ್ಷಗಳ ಕಾಲ ಜೈಲಿಗೆ ಕಳುಹಿಸಿದೆ.
ನ್ಯಾಯಾಲಯವು ಅಲಿಗೆ 1 ಕೋಟಿ ರೂಪಾಯಿ ದಂಡವನ್ನೂ ವಿಧಿಸಿದೆ. ದಂಡ ಕಟ್ಟಲು ವಿಫಲರಾದರೆ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಸ್ಥಿರ ಠೇವಣಿ ರೂಪದಲ್ಲಿ ಇಡಿ ಜಪ್ತಿ ಮಾಡಿದ್ದ 1.76 ಕೋಟಿ ರೂಪಾಯಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ನ್ಯಾಯಾಲಯ ಆದೇಶಿಸಿದೆ.





