ವಿಟ್ಲ: ಪಿ ಎಫ್ ಐ ಬ್ಯಾಂಕ್ ಖಾತೆ ಮುಟ್ಟುಗೋಲು ಹಿನ್ನೆಲೆ-ವಿಟ್ಲದಲ್ಲಿ ಇಡಿ ವಿರುದ್ಧ ಪಿ ಎಫ್ ಐ ಪ್ರತಿಭಟನೆ: ಇ.ಡಿ ಬಿಜೆಪಿ ಸಂಘಪರಿವಾರದ ಸುಪಾರಿ ಗ್ಯಾಂಗ್: ತುಪೈಲ್
ವಿಟ್ಲ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿಟ್ಲ ವಲಯ ವತಿಯಿಂದ ಸಂಘಟನೆಯ ಬ್ಯಾಂಕ್ ಖಾತೆಗಳ ಮುಟ್ಟುಗೋಲು ಹಾಕಿರುವ ಇಡಿ ವಿರುದ್ಧ ಪ್ರತಿಭಟನೆ ವಿಟ್ಲದಲ್ಲಿ ನಡೆಯಿತು.
ಪಿ ಎಫ್ ಐ ರಾಜ್ಯ ಸಮಿತಿ ಸದಸ್ಯ ತುಪೈಲ್ ಮಾತನಾಡಿ ಬಿಜೆಪಿ ಸರಕಾರ ಮತ್ತು ಸಂಘಪರಿವಾರದ ಸುಪಾರಿ ಗ್ಯಾಂಗ್ ಆಗಿರುವ ಐಟಿ ಮತ್ತು ಇಡಿ ಪಿ ಎಫ್ ಐ ನಡೆಸುತ್ತಿರುವ ಹೋರಾಟ ಹತ್ತಿಕ್ಕಲು ಈ ರೀತಿಯಾಗಿ ಮಾಡುತ್ತಿದೆ. ಡಿ.ಕೆ ಶಿವಕುಮಾರ್, ರಾಹುಲ್ ಗಾಂಧಿ ಮೇಲೆ ದಾಳಿ ನಡೆಸುವ ಮೂಲಕ ಹೆದರಿಸುತ್ತಿದೆ. ವಿರೋಧ ಪಕ್ಷದ ನಾಯಕರನ್ನು ಬಿಜೆಪಿಗೆ ಹೋಗುವಂತೆ ಪ್ರೇರೆಪಿಸುವಂತೆ ಮಾಡಲಾಗುತ್ತಿದೆ. ಆದರೆ ಪಿ ಎಫ್ ಐ ಇಂತಹ ಬೆದರಿಕೆಗಳಿಗೆ ಬಗ್ಗುವುದಿಲ್ಲ. ನಮ್ಮ ಸಿದ್ಧಾಂತ ಮತ್ತು ಹೋರಾಟ ನಿಲ್ಲುವುದಿಲ್ಲ. ಪಿ ಎಫ್ ಐ ಎಂಬುದು ಒಂದು ಜನಾಂದೋಲನವಾಗಿದೆ. ಇದನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಇನ್ನಷ್ಟು ಬಲಿಷ್ಠಗೊಳ್ಳಲಿದೆ ಎಂದರು.
ಪಿಎಫ್ ಐ ಸಂವಿಧಾನ ವನ್ನು ಗೌರವ ನೀಡುತ್ತಿದೆ.
ನಮ್ಮ ಸಂಘಟನೆ ಕಾನೂನನ್ನು ಪಾಲಿಸಿಕೊಂಡು ಮುನ್ನಡೆಯುತ್ತಿದೆ. ಆರ್ ಎಸ್ ಎಸ್ ಇದುವರೆಗೂ ನೊಂದಾವಣೆ ಮಾಡಿಕೊಂಡಿಲ್ಲ. ದೇಶದಲ್ಲಿ ವಿದ್ವಾಂಸಕ ಕೃತ್ಯಗಳನ್ನು ನಡೆಸಿಕೊಂಡು ಬರುತ್ತಿದೆ ಇದರ ವಿರುದ್ಧ ಇದುವರೆಗೆ ಯಾವುದೇ ಕ್ರಮವಾಗಲಿ ದಾಳಿ ನಡೆದಿಲ್ಲ. ಬಿಜೆಪಿ ಸರಕಾರ ಜನರ ಹಿತಶಕ್ತಿ ಗಾಗಿ ಕೆಲಸ ಮಾಡುತ್ತಿಲ್ಲ. ಕಾರ್ಯಕರ್ತರ ಶಕ್ತಿ ಇರುವ ವರೆಗೂ ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭ ಪಿ ಎಫ್ ಐ ವಿಟ್ಲ ವಲಯ ಅಧ್ಯಕ್ಷ ರಹೀಂ ಹಾಲಾಡಿ, ಕಾರ್ಯದರ್ಶಿ ಹನೀಪ್, ವಿಟ್ಲ ಡಿವಿಜನ್ ಅಧ್ಯಕ್ಷ ಶಾಫಿ ಮಾಳಿಗೆ, ಕಲ್ಲಡ್ಕ ಡಿವಿಜನ್ ಅಧ್ಯಕ್ಷ ಸಿದ್ದಿಕ್ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.