August 14, 2026

ಮಂಗಳೂರಿನಲ್ಲಿ ಪತ್ನಿ, ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ

0
image_editor_output_image-1237206188-1731157848407

ಮಂಗಳೂರು: ಪತ್ನಿ, ಮಗುವನ್ನು ಕೊಂದ ವ್ಯಕ್ತಿ ಸಾವಿಗೆ ಶರಣಾಗಿರುವ ಭೀಕರ ಘಟನೆ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಕಾರ್ತಿಕ್ ಭಟ್‌ ಎಂದು ಗುರುತಿಸಲಾಗಿದೆ.

ಕಾರ್ತಿಕ್ ಭಟ್ ಅವರು ಮಂಗಳೂರು ಹೊರ ವಲಯದ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯಲ್ಲಿ ನೆಲೆಸಿದ್ದರು. ಪ್ರಿಯಾಂಕ (28), ಹೃದಯ್ (4) ಎಂಬುವವರನ್ನು ಸಾಯಿಸಿ ತಾನು ರೈಲಿಗೆ ತಲೆಕೊಟ್ಟು ಪ್ರಾಣ ಕಳೆದುಕೊಂಡಿದ್ದಾರೆ.

ಪತ್ನಿ, ಮಗು, ಕಾರ್ತಿಕ್ ಭಟ್ ಅವರ ಈ ಸಾವು ಭಯಾನಕವಾಗಿದ್ದು, ದುರಂತಕ್ಕೆ ಕಾರಣ ಏನು ಅನ್ನೋದು ಸದ್ಯ ಬಯಲಾಗಿಲ್ಲ. ಮುಲ್ಕಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Leave a Reply

Your email address will not be published. Required fields are marked *

You may have missed

error: Content is protected !!