August 14, 2026

ನ.10 ಭಾನುವಾರ ಮಂಗಳೂರು ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ: 20ಕ್ಕಿಂತಲೂ ಅಧಿಕ ರೋಗಗಳ ವೈದ್ಯರು ಲಭ್ಯ

0
image_editor_output_image1897553499-1731144562699

ಮಂಗಳೂರು: ಪಡೀಲ್ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪುಟ್ಟಣ ಕುಲಾಲ್ ಪ್ರತಿಷ್ಠಾನ, ಎಂ ಫ್ರೆಂಡ್ಸ್ ಮಂಗಳೂರು, ಶಿವ ಫ್ರೆಂಡ್ಸ್ ಕ್ಲಬ್, ಎಸ್ ವೈ ಎಸ್ ಇಸಾಬ ದ.ಕ, ಹಿದಾಯ ಫೌಂಡೇಶನ್ ಮಂಗಳೂರು, ಕನ್ನಡ ಕಟ್ಟೆ ಮಂಗಳೂರು, ಎಸ್ಕೆಎಸ್ ಎಸ್ ಎಫ್ ವಿಖಾಯ, ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್, ಮಸೂದ್ ಕಾಲೇಜ್ ಆಫ್ ನರ್ಸಿಂಗ್ ಮಂಗಳೂರು ಇವರ ಸಹಕಾರದೊಂದಿಗೆ ಅದ್ಧೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ, ನಮ್ಮ ನಗರ ಸ್ವಚ್ಚ ನಗರ ಅಭಿಯಾನ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ನ.10ರ ಭಾನುವಾರ ಜನಪ್ರಿಯ ಆಸ್ಪತ್ರೆಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಸಾಧಕರಾದ ನಜೀರ್ ಬೆಂಗ್ರೆ, ಶಶಿಧರ್ ಶೆಟ್ಟಿ ಮತ್ತು ಜಾರ್ಜ್ ಪಿವಿ ಅವರಿಗೆ ಸನ್ಮಾನ ನಡೆಯಲಿದೆ.

ಶೇ. 50% ರಿಯಾಯಿತಿ ದರದಲ್ಲಿ ರಕ್ತ ಪರೀಕ್ಷೆ, ಸಿಟಿ ಸ್ಕ್ಯಾನ್, ಕ್ಷ ಕಿರಣ, ಅಲ್ಟಾಸೌಂಡ್, ಇಸಿಜಿ ಸೌಲಭ್ಯ ದೊರೆಯಲಿದೆ.
ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಧುಮೇಹ, ರಕ್ತದ ಒತ್ತಡ ಪರೀಕ್ಷೆ, ಶಸ್ತ್ರ ಚಿಕಿತ್ಸ ವೈದ್ಯರು, ಕಿಡ್ನಿ ಮತ್ತು ಮೂತ್ರಕೋಶ ತಜ್ಞರು, ಕೀಲು ಮೂಳೆ ಮತ್ತು ಬೆನ್ನು ಮೂಲೆ ಶಸ್ತ್ರ ಚಿಕಿತ್ಸ ತಜ್ಞರು, ಕಿವಿ, ಮೂಗು ಗಂಟಲು ತಜ್ಞರು, ಪ್ರಸೂತಿ ಸ್ತ್ರೀರೋಗ, ಮಕ್ಕಳ ಮತ್ತು ಕಾಸ್ಮೆಟಿಕ್ ಶಸ್ತ್ರ ಚಿಕಿತ್ಸಾ ತಜ್ಞರು ಲಭ್ಯ ಇರಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ಜನಪ್ರಿಯ ಫೌಂಡೇಶನ್ ಅಧ್ಯಕ್ಷ ಡಾ. ವಿಕೆ ಅಬ್ದುಲ್ ಬಶೀರ್ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!