ಮದರಸ ಮಸೀದಿಗಳ ಮೂಲಭೂತ ಸೌಕರ್ಯಗಳಿಗೆ ಸರಕಾರ ಅನುದಾನ ಒದಗಿಸಬೇಕು: ಎಸ್ ಎಂ ಎ ಆಗ್ರಹ
ವಿಟ್ಲ ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಎಸ್ ಎಂ ಎ ವಿಟ್ಲ ರಿಜನಲ್ ಸಮಿತಿ ವಾರ್ಷಿಕ ಮಹಾಸಭೆ ಒಕ್ಕೆತೂರು ನೂರ್ ಹಾಲ್ ನಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಎಸ್ ಎಂ ಎ ಇದರ ಕೋಶಾಧಿಕಾರಿ ಹಾಜಿ ಅಬ್ದುಲ್ ಹಮೀದ್ ಕೊಡಂಗಾಯಿ ಮಾತನಾಡಿ, ಸರ್ಕಾರ ಮಸೀದಿ ಮದರಸಗಳ ಮೂಲಭೂತ ಸೌಕರ್ಯಕ್ಕಾಗಿ ವಿಶೇಷ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು. ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಉತ್ತಮವಾಗಿ ಕಾರ್ಯಾಚರಿಸುವ ಮೂಲಕ ಮದರಸಾ ಮಸೀದಿಗಳ ಸಬಲೀಕರಣಕ್ಕಾಗಿ ಸಮಾಜವನ್ನು ಜಾಗೃತಿಗೊಳಿಸುವ ಪ್ರಯತ್ನ ಎಸ್ ಎಂ ಎ ಮೂಲಕ ಆಗಬೇಕು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೀಜನಲ್ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಹಕೀಮ್ ವಹಿಸಿದ್ದರು. ಎಸ್ ಎಂ ಎ ಝೋನ್ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಸಿಂ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಾಸಭೆಯಲ್ಲಿ ರೀಜನಲ್ ಪ್ರಧಾನ ಕಾರ್ಯದರ್ಶಿ ಸಾಧಿಕ್ ಸಖಾಫಿ ವಾರ್ಷಿಕ ವರದಿ ಲೆಕ್ಕಪತ್ರ ಮಂಡಿಸಿದರು. ರಾಜ್ಯ ನಾಯಕ ಅಬ್ದುಲ್ ಹಮೀದ್ ಹಾಜಿ ನೇತೃತ್ವದಲ್ಲಿ ಹೊಸ ಸಮಿತಿ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಅಬ್ದುಲ್ ರಜಾಕ್ ಕುಂಡಡ್ಕ ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ಸಅದಿ ಬಾರಬೆಟ್ಟು ಮತ್ತು ಕೋಶಾಧಿಕಾರಿಯಾಗಿ ಅಬ್ದುಲ್ ಹಮೀದ್ ಹಾಜಿ ಕಾಂತಡ್ಕ ಆಯ್ಕೆಯಾದರು.
ಉಪಾಧ್ಯಕ್ಷರುಗಳಾಗಿ ಅಶ್ರಫ್ ಒಕ್ಕೆತ್ತೂರು ,ಸಿದ್ದೀಕ್ ಪೆರುವಾಯಿ, ಕಾರ್ಯದರ್ಶಿಗಳಾಗಿ ಅಬ್ಬಾಸ್ ಮದನಿ ಕೊಡಂಗಾಯಿ ಶಮ್ಸುದ್ದಿನ್ ಮಂಗಿಳ ಪದವು ಸಂಘಟನಾ ಕಾರ್ಯದರ್ಶಿಯಾಗಿ ಹಾರಿಸ್ ಒಕ್ಕೆತ್ತೂರು ಹಾಗೂ 30 ಮಂದಿ ಸದಸ್ಯರನ್ನು ಒಳಗೊಂಡ ರೀಜನಲ್ ಸಮಿತಿ ರಚಿಸಲಾಯಿತು. ಈ ಸಂದರ್ಭದಲ್ಲಿSJM ವಿಟ್ಲ ರೇಂಜ್ ಅಧ್ಯಕ್ಷರಾದ ಶರೀಫ್ ಮದನಿ SMA ಝೋನಲ್ ಕೋಶಾಧಿಕಾರಿ ಉಮ್ಮರ್ ವಿಟ್ಲ ಎಸ್ ಜೆ ಎಂ ಕಾರ್ಯದರ್ಶಿ ಅಬ್ದುಲ್ ರಜಾಕ್ ಫುರ್ಕಾನಿ, ಸುನ್ನೀ ಅಬೂಬಕ್ಕರ್ ಫೈಝಿ, ಒಕ್ಕೆತ್ತೂರು ಜುಮ್ಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್, ಖತೀಬ್ ರಫೀಕ್ ಅಹ್ಸನಿ ಉಪಸ್ಥಿತರಿದ್ದರು. SMA ಝೋನ್ ಸಂಘಟನಾ ಕಾರ್ಯದರ್ಶಿ ಆರಿಸ್ ಮದನಿ ಸ್ವಾಗತಿಸಿ ವಂದಿಸಿದರು.




