March 26, 2026

ಉಪ್ಪಿನಂಗಡಿ ಕಾಲೇಜಿನಲ್ಲಿ ಮುಂದುವರಿದ ಹಿಜಾಬ್ ವಿವಾದ: ಎಬಿವಿಪಿ ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕಾರ

0
image_editor_output_image1518171444-1654246522730.jpg

ಉಪ್ಪಿನಂಗಡಿ: ಕೆಲ ದಿನಗಳಿಂದ ಸದ್ದು ಮಾಡುತ್ತಿರುವ ಉಪ್ಪಿನಂಗಡಿ ಕಾಲೇಜಿನ ಹಿಜಾಬ್ ವಿವಾದವೂ ಇಂದು ಕೂಡ ಮುಂದುವರೆದಿದೆ.

ಕೆಲ ವಿದ್ಯಾರ್ಥಿನಿಯರು ಇಂದು ಕೂಡ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದು, ಈ ಹಿನ್ನೆಲೆ ಕಾಲೇಜಿನ ಎಬಿವಿಪಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ವಿವಾದ ಇತ್ಯಾರ್ಥವಾಗುವ ವರೆಗೆ ತರಗತಿಗೆ ತೆರಳುವುದಿಲ್ಲ ಎಂದು ತರಗತಿ ಹೊರಗಡೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.

ಉಪ್ಪಿನಂಗಡಿ ಸರಕಾರಿ ಕಾಲೇಜಿನಲ್ಲಿ ಕಳೆದ ಕೆಲ ದಿನಗಳಿಂದ ಹಿಜಾಬ್ ವಿವಾದ ಸದ್ದು ಮಾಡುತ್ತಿದ್ದು, ಹಿಜಾಬ್ ಧರಿಸಿ ಬರುತ್ತಿದ್ದ ಆರು ವಿದ್ಯಾರ್ಥಿನಿಯರನ್ನು ಅಮಾನತು ಮಾಡಿದ್ದು, ಆದರೂ ನಿಲ್ಲದ ವಿವಾದ ಮತ್ತೆ ಮುಂದುವರೆದಿದೆ..

ನಿನ್ನೆ ಕಾಲೇಜಿಗೆ ವರದಿಗೆಂದು ತೆರಳಿದ ಮಾಧ್ಯಮದವರ ಮೇಲೂ ಹಿಜಾಬ್ ಪರವಾದ ಕೆಲ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದು, ಈ ಹಿನ್ನೆಲೆ ಸರಿಯಾದ ತನಿಖೆ ನಡೆಸಿ ಈ ವಿವಾದಗಳನ್ನು ಅಂತ್ಯ ಮಾಡುವಂತೆ ಆಗ್ರಹಿಸಿ ಇತರ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ..

Leave a Reply

Your email address will not be published. Required fields are marked *

error: Content is protected !!