November 22, 2024

ಮ್ಯಾನ್ಮಾರ್‌ನಿಂದ 37,000 ಜನರು  ಭಾರತಕ್ಕೆ ಪಲಾಯನ:
ವಿಶ್ವಸಂಸ್ಥೆ ಮಾಹಿತಿ

0

ವಿಶ್ವಸಂಸ್ಥೆ: ಮ್ಯಾನ್ಮಾರ್‌ನಲ್ಲಿ ಆಂತರಿಕ ಸಂಘರ್ಷ ಮತ್ತೆ ಹೆಚ್ಚುವ ಆತಂಕದಿಂದ ದೇಶದ ವಾಯವ್ಯ ಭಾಗದ 37,000 ಜನರು ಮನೆಗಳನ್ನು ತೊರೆದಿದ್ದಾರೆ. ಈ ಪೈಕಿ ಅಧಿಕ ಸಂಖ್ಯೆಯ ಜನರು ಭಾರತಕ್ಕೆ ಪಲಾಯನ ಮಾಡಿರುವ ಸಾಧ್ಯತೆಗಳಿವೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

‘ದೇಶದ ವಾಯವ್ಯ ಭಾಗದಲ್ಲಿ ಮ್ಯಾನ್ಮಾರ್‌ ಮಿಲಿಟರಿ ಹಾಗೂ ಸ್ಥಳೀಯ ಪಾಪ್ಯುಲರ್ ಡಿಫೆನ್ಸ್‌ ಫೋರ್ಸ್‌ ನಡುವೆ ಇತ್ತೀಚೆಗೆ ಕದನ ಶುರುವಾಗಿದ್ದು, ಇದು ಹೆಚ್ಚಾಗುವ ಆತಂಕ ಇದೆ. ಇದರಿಂದಾಗಿ ಚಿನ್‌, ಮ್ಯಾಗ್ವೆ ಹಾಗೂ ಸಗಾಯಿಂಗ್‌ ರಾಜ್ಯಗಳಲ್ಲಿನ ಪರಿಸ್ಥಿತಿ ಕಳವಳಕಾರಿಯಾಗಿದೆ’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಅವರ ಸಹವಕ್ತಾರರಾದ ಫ್ಲಾರೆನ್ಸಿಯಾ ಸೊಟೊ ನಿನೊ ಹೇಳಿದ್ದಾರೆ.

‘ಈ ಸಂಘರ್ಷದ ಪರಿಣಾಮವಾಗಿ ಜನರು ಮನೆಗಳನ್ನು ತೊರೆದು, ಸುರಕ್ಷಿತ ತಾಣಗಳನ್ನು ಅರಸಿ ಓಡಿ ಹೋಗುತ್ತಿದ್ದಾರೆ. ಆಸ್ತಿಗಳಿಗೆ ಹಾನಿಯುಂಟಾಗಿದೆ. ಪಶ್ಚಿಮ ಚಿನ್‌ ರಾಜ್ಯದ ಥತ್ಲಾಂಗ್‌ ಪಟ್ಟಣದಲ್ಲಿ 160ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಿರುವ ಆತಂಕಕಾರಿ ಘಟನೆ ನಡೆದಿದೆ’ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!